ಮಂಗಳೂರು: ಆಟೊ ರಿಕ್ಷಾ ಪ್ರಯಾಣ ದರ ಪರಿಷ್ಕರಣೆ

Update: 2022-12-01 17:42 GMT

ಮಂಗಳೂರು, ಡಿ.1: ನಗರದಲ್ಲಿ ಗುರುವಾರದಿಂದ ಆಟೊರಿಕ್ಷಾ ಪ್ರಯಾಣ ದರ ಪರಿಷ್ಕರಣೆಗೊಂಡಿದೆ. ಮೊದಲ ಒಂದೂವರೆ ಕಿ.ಮೀ.ಗೆ ಕನಿಷ್ಠ ದರ  35 ರೂ. ನಿಗದಿಯಾಗಿದ್ದು, ನಂತರ ಪ್ರತಿ ಕಿ.ಮೀ.ಗೆ  20 ರೂ. ಹೆಚ್ಚಳ ಮಾಡಿ ಜಿಲ್ಲಾಡಳಿತದ ಈ ಹಿಂದಿನ ಆದೇಶದಂತೆ ದರ ಅನುಷ್ಠಾನಗೊಂಡಿದೆ.

ಮೆಥೆನಾಲ್ ಮತ್ತು ಎಥೆನಾಲ್ ಇಂಧನ ಬಳಸಿ ಸಂಚರಿಸುವ ಆಟೊರಿಕ್ಷಾ ಸೇರಿದಂತೆ ಎಲ್ಲ ರಿಕ್ಷಾಗಳಿಗೆ ಮಧ್ಯಭಾಗದಿಂದ ಕೆಳಗೆ ಕಪ್ಪು ಬಣ್ಣ, ಪೂರ್ತಿಯಾಗಿ ಬಳಿಯಬೇಕು ಮತ್ತು ಆಟೊರಿಕ್ಷಾದ ಮೇಲ್ಭಾಗದಿಂದ ಹಳದಿ ಬಣ್ಣ ಬಳಿಯಬೇಕು. ವಲಯ ಸಂಖ್ಯೆ 1ಕ್ಕೆ ಚೌಕಾಕಾರದ ಆಕಾಶ ನೀಲಿ ಬಣ್ಣದ ಸ್ಟಿಕರ್ ಅಥವಾ ಗುರುತಿನ ಸಂಖ್ಯೆಯನ್ನು ಪೊಲೀಸ್ ಇಲಾಖೆಯಿಂದ ಪಡೆದು ಅಂಟಿಸಿಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.

Similar News