ಕಳೆದೆರಡು ವರ್ಷಗಳಲ್ಲಿ ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿ ಹೂಡಿಕೆಗಳು ಗಣನೀಯ ಏರಿಕೆ: ವರದಿ

Update: 2022-12-02 15:34 GMT

ಹೊಸದಿಲ್ಲಿ: ಅದಾನಿ ಸಮೂಹದ (Adani Group) ಏಳು ಲಿಸ್ಟೆಡ್‌ ಕಂಪನಿಗಳ ಪೈಕಿ ನಾಲ್ಕರಲ್ಲಿ ಲೈಫ್‌ ಇನ್ಶೂರೆನ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (LIC)  ಸೆಪ್ಟೆಂಬರ್‌ 2020 ರಿಂದ ಬಹಳಷ್ಟು ಹೂಡಿಕೆ ಮಾಡಿದೆ ಎಂದು ವರದಿಗಳು ತಿಳಿಸಿವೆ.

ಅದಾನಿ ಸಮೂಹ ಕಂಪೆನಿಗಳ ರೂ 74,142 ಕೋಟಿ ಮೌಲ್ಯದ ಷೇರುಗಳನ್ನು ಎಲ್‌ಐಸಿ ಹೊಂದಿದೆ ಎಂದು ವರದಿಯಾಗಿದೆ. ಎಲ್‌ಐಸಿ ಗರಿಷ್ಠ ಹೂಡಿಕೆಯನ್ನು ಅದಾನಿ ಟೋಟಲ್‌ ಗ್ಯಾಸ್‌ನಲ್ಲಿ ಮಾಡಿದ್ದು ಈ ಸಂಸ್ಥೆಯಲ್ಲಿ ಎಲ್‌ಐಸಿ ಪಾಲುದಾರಿಕೆ ಸೆಪ್ಟೆಂಬರ್‌ 2020 ರಲ್ಲಿ ಶೇ. 1 ಕ್ಕಿಂತಲೂ ಕಡಿಮೆಯಿದ್ದರೆ ಸೆಪ್ಟೆಂಬರ್‌ 2022 ರಲ್ಲಿ ಅದು ಶೇ 5.77 ಗೆ ಏರಿಕೆಯಾಗಿದೆ ಎಂದು Indian Express ವರದಿ ಮಾಡಿದೆ.

ಅದೇ ರೀತಿ ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಎಲ್‌ಐಸಿಯ ಹೂಡಿಕೆ ಶೇ. 1 ರಿಂದ ಶೇ. 4.02 ರಷ್ಟು ಏರಿಕೆಯಾಗಿದ್ದರೆ ಅದಾನಿ ಟ್ರಾನ್ಸ್‌ಮಿಷನ್‌ನಲ್ಲಿ ಶೇ 2.42 ರಿಂದ ಶೇ 3,46 ಗೆ ಏರಿಕೆಯಾಗಿದೆ. ಅದಾನಿ ಗ್ರೀನ್‌ ಎನರ್ಜಿಯಲ್ಲಿ ಎಲ್‌ಐಸಿ ಹೂಡಿಕೆ ಶೇ 1 ರಿಂದ ಶೇ 1.5ಗೆ ಏರಿಕೆಯಾಗಿದೆ.

ಅದೇ ಸಮಯ ಅದಾನಿ ಪೋರ್ಟ್ಸ್‌, ಅದಾನಿ ಪವರ್‌ ಮತ್ತು ಅದಾನಿ ವಿಲ್ಮಾರ್‌ನಲ್ಲಿ ಎಲ್‌ಐಸಿ ಅಷ್ಟೊಂದು ಹೂಡಿಕೆ ಮಾಡಿಲ್ಲ.

ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಟಾಟಾ ಗ್ರೂಪ್‌ ನಂತರ ಎಲ್‌ಐಸಿ ಗರಿಷ್ಠ ಹೂಡಿಕೆ ಮಾಡಿದ ಮೂರನೇ ಸಂಸ್ಥೆ ಅದಾನಿ ಸಮೂಹವಾಗಿದೆ.

ಎಲ್‌ಐಸಿ ಸಂಸ್ಥೆಯು ಅದಾನಿ ಸಮೂಹದ ಷೇರುಗಳಲ್ಲಿ ಕಳೆದೆರಡು ವಷಗಳಲ್ಲಿ ಮಾಡಿದ ಹೂಡಿಕೆ ಮ್ಯೂಚುವಲ್‌ ಫಂಡ್‌ಗಳು ಮಾಡಿದ ಹೂಡಿಕೆಗಳಿಗಿಂತ 4.9 ಪಟ್ಟು ಹೆಚ್ಚಾಗಿದೆ ಎಂದು ವರದಿಯೊಂದು ಹೇಳಿದೆ.

ಅದಾನಿ ಸಮೂಹದ ಐದು ಸಂಸ್ಥೆಯ ಷೇರುಗಳಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆಗಳ ಪೈಕಿ ಎಲ್‌ಐಸಿ ಯ ಪಾಲು ಶೇ 81.7 ಆಗಿದೆ.

ಸರಕಾರಿ ಸಂಸ್ಥೆಯಾಗಿರುವ ಎಲ್‌ಐಸಿ ಈ ರೀತಿ ಒಂದೇ ಸಂಸ್ಥೆಯಲ್ಲಿ ಹೆಚ್ಚು ಹೂಡಿಕೆಯನ್ನು ಯಾವುದೇ ಕಾರಣ ನೀಡದೆ ಮಾಡುತ್ತಿರುವುದು ಹಲವು ತಜ್ಞರು ಹೇಳುತ್ತಿದ್ದಾರೆ.

ಇದನ್ನೂ: ಜಿದ್ದಾದಿಂದ ಹೊರಟಿದ್ದ 197 ಪ್ರಯಾಣಿಕರಿದ್ದ ವಿಮಾನ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಷ

Similar News