ಏಮ್ಸ್ ಸರ್ವರ್ ಮೇಲೆ ಹ್ಯಾಕರ್ ದಾಳಿ ಚೀನಾ ಭಾಗಿಯಾಗಿರುವ ಶಂಕೆ

Update: 2022-12-02 15:45 GMT

ಹೊಸದಿಲ್ಲಿ, ಡಿ. 2: ದಿಲ್ಲಿ ಏಮ್ಸ್ ಮೇಲಿನ ಸೈಬರ್ ದಾಳಿ ಲಕ್ಷಾಂತರ ರೋಗಿಗಳ ವೈಯುಕ್ತಿ ಡಾಟಾ ಸೋರಿಕೆಗೆ ಕಾರಣವಾಗಿದೆ.

ಚೀನಾದ ಹ್ಯಾಕರ್ಗಳು ನಡೆಸಿರುವುದೆಂದು ಶಂಕಿಸಲಾದ ಈ ಸೈಬರ್ ದಾಳಿ ಏಮ್ಸ್ನ ಒಟ್ಟು ಐದು ಮುಖ್ಯ ಸರ್ವರ್ಗಳನ್ನು ಗುರಿಯಾಗಿರಿಸಿತ್ತು ಎಂದು ಮೂಲಗಳು ತಿಳಿಸಿವೆ.

ಈ ಕಳವುಗೈದ ದತ್ತಾಂಶಗಳನ್ನು ಅಂತರ್ಜಾಲದ ರಹಸ್ಯ ಭಾಗವಾಗಿರುವ ಡಾರ್ಕ್ ವೆಬ್ನಲ್ಲಿ ಮಾರಾಟ ಮಾಡುವ ಸಾಧ್ಯತೆ ಇದೆ.

ಏಮ್ಸ್ನಿಂದ  ಕಳವುಗೈಯಲಾದ ದತ್ತಾಂಶಕ್ಕಾಗಿ ಡಾರ್ಕ್ ವೆಬ್ನಲ್ಲಿ 1,600ಕ್ಕೂ ಅಧಿಕ ಶೋಧ ನಡೆದಿದೆ ಎಂದು ದತ್ತಾಂಶ ತೋರಿಸಿದೆ. ಕಳವುಗೈಯಲಾದ ದತ್ತಾಂಶ ರಾಜಕಾರಣಿಗಳು ಹಾಗೂ ಗಣ್ಯರು ಸೇರಿದಂತೆ ವಿವಿಐಪಿಗಳ ವಿವರಗಳು ಸೇರಿವೆ. 

Similar News