ಲಾತ್ವಿಯಾ ಪ್ರವಾಸಿ ಮಹಿಳೆಯ ಅತ್ಯಾಚಾರ, ಹತ್ಯೆ ಪ್ರಕರಣ ಇಬ್ಬರು ದೋಷಿಗಳು: ಕೇರಳ ನ್ಯಾಯಾಲಯ ತೀರ್ಪು

Update: 2022-12-02 17:40 GMT

ತಿರುವನಂತಪುರ, ಡಿ. 2:  ಲಾತ್ವಿಯಾದ ಪ್ರವಾಸಿ ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಇಲ್ಲಿನ ಹೆಚ್ಚುವರಿ ಸತ್ರ ನ್ಯಾಯಾಲಯ ಶುಕ್ರವಾರ ಇಬ್ಬರು ವ್ಯಕ್ತಿಗಳು ದೋಷಿಗಳು ಎಂದು ತೀರ್ಪು ನೀಡಿದೆ.

ಕೋವಲಂ ಬೀಚ್ನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಲಾತ್ವಿಯಾದ 33 ವರ್ಷದ ಪ್ರವಾಸಿ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉಮೇಶ್ (28) ಹಾಗೂ ಉದಯನ್ (24) ದೋಷಿ ಎಂದು ತಿರುವನಂತಪುರದ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಲಾತ್ವಿಯಾ ಮಹಿಳೆ ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಆಗಮಿಸಿದ್ದರು. 2018 ಮಾರ್ಚ್ 14ರಂದು ಅವರು ಕೋವಳಂ ಬೀಚ್ನಿಂದ ನಾಪತ್ತೆಯಾಗಿದ್ದರು. ಅವರ ತಲೆಯಿಲ್ಲದ ಹಾಗೂ ಸಂಪೂರ್ಣ ಕೊಳೆತ ಮೃತದೇಹ ತಿರುವಲ್ಲಂ ಸಮೀಪದ ಮ್ಯಾಂಗ್ರೂ ಅರಣ್ಯದಲ್ಲಿ 2018 ಎಪ್ರಿಲ್ 21ರಂದು ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ 2018 ಮೇ 3ರಂದು ಉಮೇಶ್ ಹಾಗೂ ಉದಯನ್ರನ್ನು ಪೊಲೀಸರು ಬಂಧಿಸಿದ್ದರು.

ಮಹಿಳೆಯ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದುದರಿಂದ ನಾವು ಜೈವಿಕ ಪುರಾವೆಗಳನ್ನು ಕಳೆದುಕೊಂಡಿದ್ದೆವು. ಆದರೆ, ಪೊಲೀಸರ ಸಾಂದರ್ಭಿಕ ಪುರಾವೆಗಳು  ಪ್ರಕರಣಕ್ಕೆ ಆ‘ಾರವಾಯಿತು. ಅದನ್ನು ಯಶಸ್ವಿಯಾಗಿ ಸಾಬೀತುಪಡಿಸಲು ಪ್ರಾಸಿಕ್ಯೂಷನ್ಗೆ ಸಾ‘್ಯವಾಯಿತು ಎಂದು ಪ್ರಾಸಿಕ್ಯೂಟರ್ ಮಾ‘್ಯಮಗಳಿಗೆ ತಿಳಿಸಿದರು. 

Similar News