ಈ ಮೂವರು ಐಐಟಿ ಪದವೀಧರರು ಪಡೆದ ವಾರ್ಷಿಕ ವೇತನದ ಆಫರ್ ಎಷ್ಟು ಗೊತ್ತೇ ?

Update: 2022-12-03 02:46 GMT

ಮುಂಬೈ: ಈ ಬಾರಿಯ ಐಐಟಿ ನೇಮಕಾತಿ ಸೀಸನ್‍ನಲ್ಲಿ ಐಐಟಿ ಪದವೀಧರರು ಹಾಂಕಾಂಗ್ ಮತ್ತು ಸಿಂಗಾಪುರದತ್ತ ಮುಖ ಮಾಡಿದ್ದಾರೆ. ಇಲ್ಲಿನ ವ್ಯಾಪಾರಿ ಸಂಸ್ಥೆಗಳು ಭಾರಿ ಆಫರ್‍ನೊಂದಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿವೆ.

ಬೃಹತ್ ವ್ಯಾಪಾರಿ ಸಮೂಹವಾದ ಜೇನ್‍ಸ್ಟ್ರೀಟ್, ಬಾಂಬೆ, ದೆಹಲಿ ಹಾಗೂ ಕಾನ್ಪುರ ಐಐಟಿಯ ತಲಾ ಒಬ್ಬರಿಗೆ 3.6 ಕೋಟಿ ರೂಪಾಯಿಯ ದಾಖಲೆ ಆಫರ್ ನೀಡಿದೆ.

ಆದರೆ ಈ ಬಾರಿಯ ನೇಮಕಾತಿ ಸೀಸನ್ ಆರಂಭಕ್ಕೆ ಮುನ್ನ ಈ ಪ್ರಿ-ಪ್ಲೇಸ್‍ಮೆಂಟ್ ಆಫರ್‍ಗಳನ್ನು ನೀಡಲಾಗಿದೆ.
ಮತ್ತೊಂದು ಬೃಹತ್ ವ್ಯಾಪಾರಿ ಸಮೂಹವಾದ ಕ್ವಂಟ್‍ಬಾಕ್ಸ್ ರೀಸರ್ಚ್, ಹಲವು ವಿದ್ಯಾರ್ಥಿಗಳಿಗೆ ತನ್ನ ಸಿಂಗಾಪುರ ಕಚೇರಿಗೆ 1.6 ಕೋಟಿ ರೂಪಾಯಿಯ ಆಫರ್ ನೀಡಿದೆ. ಆದರೆ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಅಮೆರಿಕದ ಕೆಲವೇ ಐಟಿ ದಿಗ್ಗಜ ಕಂಪನಿಗಳು ಒಂದು ಕೋಟಿಗಿಂತ ಅಧಿಕದ ದೊಡ್ಡ ಆಫರ್‍ಗಳನ್ನು ನೀಡಿವೆ. ಕೊಹೆಸಿಟಿಯಂಥ ಕೆಲ ಸಂಸ್ಥೆಗಳು ದೇಶೀಯ ಹೊಣೆಗಾರಿಕೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅಮೆರಿಕಕ್ಕೆ ಕಳುಹಿಸುವ ಭರವಸೆ ನೀಡಿವೆ.

ಜೇನ್‍ಸ್ಟ್ರೀಟ್, ಬಾಂಬೆ ಐಐಟಿಯ ವಿದ್ಯಾರ್ಥಿಯೊಬ್ಬರಿಗೆ ಗರಿಷ್ಠ ಆಫರ್ ನೀಡಿದ್ದು, ಹಲವು ವಿದ್ಯಾರ್ಥಿಗಳು ಎರಡು ಕೋಟಿ ರೂಪಾಯಿಯ ಆಫರ್ ಗಳಿಸಿದ್ದಾರೆ ಎಂದು ಐಐಟಿ-ಬಿ ಮೂಲಗಳು ಹೇಳಿವೆ. ಆದರೆ ಕ್ಯಾಂಪಸ್ ನೇಮಕಾತಿಯಲ್ಲಿ ಯಾರಿಗೂ ಎರಡು ಕೋಟಿಯ ಆಫರ್‍ಗಳು ಬಂದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

15 ಅಂತರರಾಷ್ಟ್ರೀಯ ಕಂಪನಿಗಳು ಒಂದು ಕೋಟಿಗೂ ಅಧಿಕದ ಹಲವು ಆಫರ್‍ಗಳನ್ನು ನೀಡಿವೆ. ಅಮೆರಿಕ ಮತ್ತು ಜಪಾನ್‍ನ ವೀಸಾ ಸಮಸ್ಯೆಯಿಂದಾಗಿ ಭಾರತ ಕಚೇರಿಗೆ ಆಫರ್ ನೀಡಿವೆ. ಕ್ವಂಟ್‍ಬಾಕ್ಸ್ ರೀಸರ್ಚ್ 1.6 ಕೋಟಿಯ ಒಂದು ಆಫರ್ ನೀಡಿದೆ.

ಮೊದಲ ದಿನ 46 ಕಂಪನಿಗಳು ಸಂದರ್ಶನ ನಡೆಸಿದ್ದು, 250 ಉದ್ಯೋಗ ಆಫರ್‍ಗಳ ಪೈಕಿ 175 ಮಂದಿ ಒಪ್ಪಿಕೊಂಡಿದ್ದಾರೆ. ಎರಡನೇ ದಿನ 48 ಕಂಪನಿಗಳು ಐಐಟಿ-ಬಿಯಲ್ಲಿ ಸಂದರ್ಶನ ನಡೆಸಿವೆ. ಐಐಟಿ ಗುವಾಹತಿಯಲ್ಲಿ ಎರಡನೇ ದಿನ 50 ಕಂಪನಿಗಳು 80ಕ್ಕೂ ಹೆಚ್ಚು ಆಫರ್ ನೀಡಿವೆ ಎಂದು imesofindia.com ವರದಿ ಮಾಡಿದೆ.

Similar News