ರೈಲ್ವೆ ಉದ್ಯೋಗಾಕಾಂಕ್ಷಿಗಳಿಗೆ ಯುಪಿಎಸ್‍ಸಿಯಿಂದ ಪ್ರತ್ಯೇಕ ಪರೀಕ್ಷೆ

Update: 2022-12-03 09:52 GMT

ಹೊಸದಿಲ್ಲಿ: ಭಾರತೀಯ ರೈಲ್ವೆ ವ್ಯವಸ್ಥಾಪಕ ಸೇವೆ (IRMS) ನೇಮಕಾತಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ಪರೀಕ್ಷೆಯ ಮೂಲಕ ನಡೆಸಲಾಗುವುದು ಎಂದು ಶುಕ್ರವಾರ ರೈಲ್ವೆ ಸಚಿವಾಲಯ ಪ್ರಕಟಿಸಿದೆ. ಈ ಪರೀಕ್ಷೆಯನ್ನು 2023ರ ನಂತರದಿಂದ ಯುಪಿಎಸ್‍ಸಿ (UPSC) ಮೂಲಕ ನಡೆಸಲಾಗುತ್ತದೆ.

ಭಾರತೀಯ ರೈಲ್ವೆ ವ್ಯವಸ್ಥಾಪಕ ಸೇವೆ ಪರೀಕ್ಷೆಯು ಎರಡು ಹಂತದ್ದಾಗಿದ್ದು, ಪ್ರಾಥಮಿಕ ಪರಿಶೀಲನೆಯ ನಂತರ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿವೆ. ಐಆರ್ ಎಂಎಸ್‍ ಮುಖ್ಯ ಲಿಖಿತ ಪರೀಕ್ಷೆಗೆ ಅವಕಾಶ ಪಡೆಯುವ ಪರಿಶೀಲಿತ ಅಭ್ಯರ್ಥಿಗಳ ಪೈಕಿ ಅರ್ಹ ಅಭ್ಯರ್ಥಿಗಳು ನಾಗರಿಕ ಸೇವೆಗಳು (ಪ್ರಾಥಮಿಕ) ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಐಆರ್ ಎಂಎಸ್ ಮುಖ್ಯ ಪರೀಕ್ಷೆಯು ನಾಲ್ಕು ಪ್ರಶ್ನೆ ಪತ್ರಿಕೆಗಳನ್ನು ಹೊಂದಿರಲಿದ್ದು, ಅವು ಸಾಂಪ್ರದಾಯಿಕ ಲಘು ಲೇಖನ ಶೈಲಿಯನ್ನು ಹೊಂದಿರುತ್ತದೆ.

ಭಾಗ-1ರ ಪ್ರಶ್ನೆ ಪತ್ರಿಕೆ ಎ ಅನ್ನು ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ನಮೂದಾಗಿರುವ ಯಾವುದೇ ಭಾಷೆಯನ್ನು ಆಯ್ದುಕೊಂಡು ಅಭ್ಯರ್ಥಿಗಳು ಉತ್ತರಿಸಬಹುದಾಗಿದೆ. ಈ ಪ್ರಶ್ನೆಪತ್ರಿಕೆಯು 300 ಅಂಕಗಳನ್ನು ಹೊಂದಿರುತ್ತದೆ. ಪ್ರಶ್ನೆ ಪತ್ರಿಕೆ ಬಿ ಇಂಗ್ಲಿಷ್ ಭಾಷೆಯಲ್ಲಿದ್ದು, ಅದೂ ಕೂಡಾ 300 ಅಂಕಗಳನ್ನು ಹೊಂದಿದೆ.

ಭಾಗ 2ರಲ್ಲಿ ಐಚ್ಛಿಕ ವಿಷಯಗಳಿರಲಿದ್ದು, ವಿಷಯ 1ಕ್ಕೆ 250 ಅಂಕಗಳು ಹಾಗೂ ವಿಷಯ 2ಕ್ಕೂ 250 ಅಂಕಗಳಿರಲಿವೆ. ಇದರ ಬೆನ್ನಿಗೇ ಭಾಗ 3 ಇರಲಿದ್ದು, 100 ಅಂಕಗಳನ್ನು ಹೊಂದಿರುವ ಈ ಭಾಗವು ವ್ಯಕ್ತಿತ್ವದ ಪರೀಕ್ಷೆಯಾಗಿದೆ.

ಆಯ್ಕೆ ಮಾಡಬಹುದಾದ ಐಚ್ಛಿಕ ವಿಷಯಗಳು ಹೀಗಿವೆ:

►ಸಿವಿಲ್ ಎಂಜಿನಿಯರಿಂಗ್
►ಮೆಕಾನಿಕಲ್ ಎಂಜಿನಿಯರಿಂಗ್
►ಎಲೆಕ್ಟ್ರಿಕಲ್ ಎಂಜಿನಿಯರಿಂಗ್
►ವಾಣಿಜ್ಯ ಮತ್ತು ಲೆಕ್ಕ ಶಾಸ್ತ್ರ

ನಾಗರಿಕ ಸೇವಾ ಪರೀಕ್ಷೆಗಳಿಗೂ ಮೇಲೆ ಹೇಳಲಾಗಿರುವ ಪ್ರಶ್ನೆಪತ್ರಿಕೆಗಳ ಪಠ್ಯಕ್ರಮವೇ ಇರಲಿದೆ.

Similar News