ಓಯೊದ ಟೆಕ್ ಮತ್ತು ಕಾರ್ಪೊರೇಟ್ ವಿಭಾಗದ 600 ಉದ್ಯೋಗಿಗಳಿಗೆ ಶೀಘ್ರ ಗೇಟ್‌ಪಾಸ್

Update: 2022-12-03 16:12 GMT

ಹೊಸದಿಲ್ಲಿ,ಡಿ.3: ತನ್ನ 3,700 ಉದ್ಯೋಗಿಗಳ ಸಂಖ್ಯೆಯನ್ನು ಶೇ.10ರಷ್ಟು ಕಡಿತ ಮಾಡುವುದಾಗಿ ಭಾರತದ ಅತ್ಯಂತ ದೊಡ್ಡ ಟ್ರಾವೆಲ್ ಟೆಕ್ ಸಂಸ್ಥೆ(Tech Institute)ಯಾಗಿರುವ ಓಯೊ(OYO) ಶನಿವಾರ ಪ್ರಕಟಿಸಿದೆ.

 ತನ್ನ ಸಾಂಸ್ಥಿಕ ಸ್ವರೂಪದಲ್ಲಿ ವ್ಯಾಪಕ ಬದಲಾವಣೆಗಳ ಅಂಗವಾಗಿ ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಿಭಾಗದ 600 ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮತ್ತು ರಿಲೇಷನ್ ಮ್ಯಾನೇಜ್‌ಮೆಂಟ್ ವಿಭಾಗಕ್ಕೆ ಹೊಸದಾಗಿ 250 ಜನರನ್ನು ನೇಮಕಗೊಳಿಸಲು ಓಯೊ ಉದ್ದೇಶಿಸಿದೆ.

ಪ್ರಾಡಕ್ಟ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗುವುದು. ಕಾರ್ಪೊರೇಟ್ ಕೇಂದ್ರ ಕಚೇರಿ ಮತ್ತು ಓಯೊ ವೆಕೇಷನ್ ಹೋಮ್‌ಗಳಲ್ಲಿಯೂ ಸಿಬ್ಬಂದಿಗಳ ಸಂಖ್ಯೆಯನ್ನು ತಗ್ಗಿಸಲಾಗುವುದು. ಇದೇ ವೇಳೆ ಪಾರ್ಟನರ್ ರಿಲೇಷನ್‌ಶಿಪ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿನೆಸ್ ಡೆವಲಪ್‌ಮೆಂಟ್ ತಂಡಗಳಿಗೆ ಹೊಸಬರನ್ನು ಸೇರಿಸಿಕೊಳ್ಳಲಾಗುವುದು ಎಂದು ಓಯೊ ತಿಳಿಸಿದೆ.

ಸುಗಮ ಕಾರ್ಯನಿರ್ವಹಣೆಗಾಗಿ ಪ್ರಾಡಕ್ಟ್ ಮತ್ತು ಇಂಜಿನಿಯರಿಂಗ್ ತಂಡಗಳನ್ನು ವಿಲೀನಗೊಳಿಸಲಾಗುವುದು ಎಂದೂ ಅದು ಹೇಳಿದೆ.

Similar News