ಕ್ಯಾಂಪಸ್‌ನಲ್ಲಿ ಕೆಮರಾ ಅಳವಡಿಸುವಂತೆ ಎಲ್ಲ ಕೇಂದ್ರಗಳಿಗೆ ಜೆಎನ್‌ಯು ಸೂಚನೆ

Update: 2022-12-03 17:24 GMT

ಹೊಸದಿಲ್ಲಿ, ಡಿ. 3:  ಕ್ಯಾಂಪಸ್‌ಗಳಲ್ಲಿ ಸಿಸಿಟಿವಿ ಕೆಮರಾಗಳನ್ನು ಅಳವಡಿಸುವಂತೆ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು) ಶುಕ್ರವಾರ ತನ್ನ ಎಲ್ಲ ಕೇಂದ್ರಗಳಿಗೆ ಸೂಚಿಸಿದೆ.

ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಲ್ಯಾಂಗ್ವೇಜ್ ಲಿಟರೇಚರ್ ಆ್ಯಂಡ್ ಕಲ್ಚರಲ್ ಸ್ಟಡೀಸ್‌ನ ಹಲವು ಗೋಡೆಗಳಲ್ಲಿ ಗುರುವಾರ ಬ್ರಾಹ್ಮಣ ವಿರೋಧಿ ಘೋಷಣೆಗಳು ಕಂಡು ಬಂದ ಒಂದು ದಿನದ ಬಳಿಕ ಆಡಳಿತ ಈ ಸಲಹೆ ನೀಡಿದೆ. ಎಲ್ಲ ಶಾಲೆಗಳು ಹಾಗೂ ಕೇಂದ್ರಗಳು ಏಕೈಕ ಆಗಮನ ಹಾಗೂ ನಿರ್ಗಮನಗಳನ್ನು ಒಳಗೊಂಡಿರಬೇಕು ಎಂದು ಕೂಡ ಆಡಳಿತ ತಿಳಿಸಿದೆ.

ಬ್ರಾಹ್ಮಣ ಹಾಗೂ ಬನಿಯಾ ಸಮುದಾಯಗಳಿಗೆ ಸೇರಿದ ಸದಸ್ಯರು ದೇಶ ಹಾಗೂ ಕ್ಯಾಂಪಸ್ ತ್ಯಜಿಸುವಂತೆ ಆಗ್ರಹಿಸಿದ ಗೋಡೆ ಬರಹದ ಫೋಟೊ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು. 

Similar News