ನಾಟೆಕಲ್ : ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಆಯ್ಕೆ

Update: 2022-12-04 05:49 GMT

ಮಂಗಳೂರು, ಡಿ.3: ನಾಟೆಕಲ್ ಮಂಗಳ ನಗರದಲ್ಲಿ ಕಾರ್ಯಾಚರಿಸುತ್ತಿರುವ, ದಕ್ಷಿಣ ಭಾರತದ ಪ್ರಸಿದ್ಧ ವಿದ್ಯಾಸಂಸ್ಥೆ ಜಾಮಿಯ ನಂದಿ  ದಾರುಸ್ಸಲಾಮ್ ನ ಶಾಖೆಯಾದ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ಇದರ ಅಧ್ಯಕ್ಷರಾಗಿ ಮೌಲಾನ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಆಯ್ಕೆಯಾಗಿದ್ದಾರೆ.

ಸಮಸ್ತ ಕೇಂದ್ರೀಯ ಮುಶಾವರ ನಾಯಕ ವಿಧ್ಯಾಬ್ಯಾಸ ಬೋರ್ಡ್ ಕಾರ್ಯದರ್ಶಿ ಶೈಖನಾ ಎ.ವಿ.ಉಸ್ತಾದ್ ಸಮ್ಮುಖದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.

ಕಾರ್ಯಾಧ್ಯಕ್ಷರಾಗಿ ಜಿಲ್ಲಾ ದಾರಿಮೀಸ್ ಅಧ್ಯಕ್ಷ ಕೆ. ಬಿ.ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ರೆಂಜಾಡಿ ಲತೀಫ್ ದಾರಿಮಿ, ಕೊಶಾಧಿಕಾರಿಯಾಗಿ ಬಾವುಚ ಮರಾಠಿಮೂಲೆ, ಗೌರವ ನಿರ್ದೇಶಕರಾಗಿ  ಸೈಯದ್  ಅಲಿ ತಂಙಳ್ ಕುಂಬೋಳ್, ಶೈಖುನಾ ಎ.ವಿ.ಉಸ್ತಾದ್  ಶೈಖುನಾ ತ್ವಾಖಾ ಉಸ್ತಾದ್, ಶೈಖುನಾ ಮಾಹಿನ್ ಉಸ್ತಾದ್ ತೊಟ್ಟಿ, ಸಲಹೆಗಾರರಾಗಿ ಉಸ್ಮಾನುಲ್ ಫೈಝಿ, ತಬೂಕ್ ದಾರಿಮಿ, ಹನೀಫ್ ದಾರಿಮಿ ಸವಣೂರು ಮತ್ತಿತರರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಾಹಿನ್ ದಾರಿಮಿ, ಇಸ್ಮಾಯೀಲ್ ಪಡ್ಪು, ಶೈಖ್ ಸಿದ್ದೀಕ್, ಮುಹಮ್ಮದ್ ಚೊಕ್ಕಬೆಟ್ಟು, ಜಮಾಲ್ ಮಂಗಳ ನಗರ, ವರ್ಕಿಂಗ್ ಕಾರ್ಯದರ್ಶಿ ಯಾಗಿ ಎನ್.ಅಶ್ರಫ್, ಜೊತೆ ಕಾರ್ಯದರ್ಶಿಗಳಾಗಿ ಅಬೂಬಕರ್ ದಾರಿಮಿ, ಅಶ್ರಫ್ ಮರಾಠಿಮೂಲೆ, ಬಶೀರ್ ಮಂಗಳನಗರ, ಸದಸ್ಯರುಗಳಾಗಿ ಶಂಸುದ್ದೀನ್ ದಾರಿಮಿ, ಅಬ್ದುಲ್ ಹಮೀದ್ ದಾರಿಮಿ, ಇಸ್ಮಾಯೀಲ್ ದಾರಿಮಿ, ಹಂಝ ದಾರಿಮಿ, ಇಬ್ರಾಹೀಂ ಚೊಕ್ಕಬೆಟ್ಟು, ಇಸ್ಮಾಯೀಲ್, ಅಶ್ರಫ್ ದಾರಿಮಿ, ಹಬೀಬ್ ಮುಸ್ಲಿಯಾರ್ ಆಯ್ಕೆಯಾದರು.

ಶೈಖುನಾ ಎ.ವಿಉಸ್ತಾದ್  ಸಭೆಯನ್ನು ಉದ್ಘಾಟಿಸಿದರು, ತಬೂಕ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು.

Similar News