ಎಂ.ನಾರಾಯಣರಿಗೆ 'ಕದ್ರಿ ಸಂಗೀತ ಸೌರಭ-2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ': ಡಿ.6ರಂದು ಪ್ರದಾನ

Update: 2022-12-04 06:34 GMT

ಮಂಗಳೂರು, ಡಿ.4: ಡಾ.ಕದ್ರಿ ಗೋಪಾಲನಾಥ್ ಅಕಾಡಮಿ ಫಾರ್ ಆರ್ಟ್ಸ್ ಆಶ್ರಯದಲ್ಲಿ ಡಿ.6ರಂದು ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್ ಅವರ 73ನೇ  ಜನುಮ ದಿನಾಚರಣೆ ಪ್ರಯುಕ್ತ 'ಕದ್ರಿ ಸಂಗೀತ ಸೌರಭ-2022' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಕದ್ರಿ ಸಂಗೀತ ಸೌರಭ ಜೀವಮಾನ ಶ್ರೇಷ್ಠ ರಾಷ್ಟ್ರಪ್ರಶಸ್ತಿಗೆ ಸಂಗೀತ ವಿದ್ವಾನ್ ಎಂ.ನಾರಾಯಣರನ್ನು ಆಯ್ಕೆ ಮಾಡಲಾಗಿದೆ. ಸಂಗೀತ ಕ್ಷೇತ್ರದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಡಾ.ಕದ್ರಿ ಗೋಪಾಲನಾಥ್ ಅಕಾಡಮಿ ಫಾರ್ ಆರ್ಟ್ಸ್ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು 50,000 ರೂ. ನಗದು ಹಾಗೂ ಬೆಳ್ಳಿಯ ಫಲಕವನ್ನು ಹೊಂದಿರಲಿದ್ದು, ಡಿ.6ರಂದು ಸಂಜೆ 5:30ಕ್ಕೆ ಮಂಗಳೂರು ಉರ್ವ ಸ್ಟೋರ್ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಡಾ.ಕದ್ರಿ ಗೋಪಾಲನಾಥ್ ಅಕಾಡಮಿ ಫಾರ್ ಆರ್ಟ್ಸ್ನ ಪ್ರಧಾನ ಕಾರ್ಯದರ್ಶಿ ಕದ್ರಿ ಮಣಿಕಾಂತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News