ಗುರುಪುರ : ಸರಕಾರಿ ಪಿಯು ಕಾಲೇಜು, ಪ್ರೌಢ, ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Update: 2022-12-04 13:18 GMT

ಗುರುಪುರ, ಡಿ.4: ಗುರುಪುರ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.

ಈ ಸಂದರ್ಭ ಶಾಸಕ ಡಾ. ಭರತ್ ಶೆಟ್ಟಿ 10 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಶಾಲೆಯ ನೂತನ ‘ಅಮೃತ ಕಟ್ಟಡ’ವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು 13.90 ಲಕ್ಷ ರೂ ವೆಚ್ಚದಲ್ಲಿ ಇನ್ನೊಂದು ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದರು.

ಕಳೆದ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ ಶೆಟ್ಟಿ, ಗ್ರಾಪಂ ಸದಸ್ಯರಾದ ಸಚಿನ್ ಅಡಪ, ಜಿ.ಎಂ.ಉದಯ ಭಟ್, ಸುನೀಲ್ ಜಲ್ಲಿಗುಡ್ಡೆ, ರಾಜೇಶ್ ಸುವರ್ಣ, ಕೂಸಪ್ಪಮಾಸ್ಟರ್, ಯಶವಂತ ಆಳ್ವ, ಜಿ.ಕೆ. ಚಂದ್ರಶೇಖರ ಭಟ್, ಜಿ.ಕೆ. ನರಸಿಂಹ ಪೂಜಾರಿ, ವಿನೋದಾ ಡಿ.ಅಂಚನ್, ಜಲಜಾ, ರತ್ನಾಕರ ಜಿ., ಲಕ್ಷ್ಮಣ್ ಶೆಟ್ಟಿ ಗುರುಪುರ, ವಿನಯ್ ಗುರುಪುರ ಮತ್ತಿತರರು ಉಪಸ್ಥಿತರಿದ್ದರು.

Similar News