ಮುಡಿಪು ಜೋಸೆಫ್ ವಾಝ್ ಕ್ಷೇತ್ರದಲ್ಲಿ‌ ವಾರ್ಷಿಕ ಮಹೋತ್ಸವ

Update: 2022-12-04 13:35 GMT

ಕೊಣಾಜೆ: ಸಂತ ಜೋಸೆಫ್ ವಾಝ್ ಪುಣ್ಯಕ್ಷೇತ್ರ ಮುಡಿಪು ಇಲ್ಲಿ ಮೂರು ದಿನಗಳ ಕಾಲ ವಿಜ್ರಂಭಣೆಯಿಂದ ನಡೆದ  ವಾರ್ಷಿಕ ಮಹೋತ್ಸವ‌ ಕಾರ್ಯಕ್ರಮವು ರವಿವಾರ ಸಂಪನ್ನಗೊಂಡಿತು.

ವಾರ್ಷಿಕ ಹಬ್ಬದ ಕೊನೆಯ ದಿನ ರವಿವಾರ ಬೆಳಗ್ಗೆ  10:30ಕ್ಕೆ ಮಹಾಬಲಿಪೂಜೆಯ ಪ್ರಧಾನ ಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಭಾಗವಹಿಸಿ ಮಹಾ ಬಲಿಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭ ಗೋವಾ ಧರ್ಮ  ಪ್ರಾಂತ್ಯದ  ಧರ್ಮಾಧ್ಯಕ್ಷರಾದ ಫಾ.ಅಲ್ಬನ್ ಡಿಸೋಜ, ಮಂಜೇಶ್ವರ ಸ್ನೇಹಾಲಯದ ಫಾ.ಸಂತೋಷ್ ಮಿನೇಜಸ್, ಮುಡಿಪು  ಪುಣ್ಯಕ್ಷೇತ್ರದ ನಿರ್ದೇಶಕರು ವಂ. ಫಾ.ಅಸ್ಸಿಸಿ ರೆಬೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.

ಉತ್ಸವದ ಎರಡನೇ ದಿನವಾದ ಶನಿವಾರ ನಡೆದ ಮಹಾಬಲಿಪೂಜೆಯ ಪ್ರಧಾನ ಗುರುಗಳಾಗಿ ಶಿವಮೊಗ್ಗ ಧಮ೯ಪ್ರಾಂತ್ಯಾದ ಧರ್ಮಾಧ್ಯಕ್ಷರು ಅತೀ.  ವಂ. ಡಾ. ಫ್ರಾನ್ಸಿಸ್ ಸೆರಾವೊ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರರು.  ಈ ಸಂದರ್ಭದಲ್ಲಿ  ಬಜಾಲ್ ಚರ್ಚಿನ ಧರ್ಮಗುರು ವಂ. ಫಾ. ಆಂಡ್ರ್ಯೂ ಡಿಸೋಜ, ಮುಡಿಪು  ಪುಣ್ಯಕ್ಷೇತ್ರದ ನಿರ್ದೇಶಕರು ವಂ. ಫಾ.ಅಸ್ಸಿಸಿ ರೆಬೆಲ್ಲೊ, ಹಾಗೂ ಹಲವಾರು ಧರ್ಮಗುರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ  ಯು. ಟಿ. ಖಾದರ್, ಮಾಜಿ ತಾಲೂಕು ಕೇಂದ್ರ ಪಂಚಾಯತಿ ಅಧ್ಯಕ್ಷರಾದ  ಚಂದ್ರಹಾಸ್ ಕಕೆ೯ರಾ, ಸಂತೋಷ್ ಕುಮಾರ್ ರೈ ಬೋಳಿಯಾರ್,  ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಭೇಟಿ ನೀಡಿದರು.

Similar News