ಮೊರ್ಬಿ ಸೇತುವೆ ದುರಂತ ಸ್ಥಳಕ್ಕೆ ಪ್ರಧಾನಿ ಭೇಟಿಗೆ 30 ಕೋಟಿ ರೂ. ಖರ್ಚಾಗಿದೆಯೇ?: PBI ಫ್ಯಾಕ್ಟ್‌ ಚೆಕ್‌ ಇಲ್ಲಿದೆ...

Update: 2022-12-04 14:54 GMT

ಹೊಸದಿಲ್ಲಿ: ಮೊರ್ಬಿ (Morbi) ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರು ಮತ್ತು ಗಾಯಾಳುಗಳನ್ನು ಸಂದರ್ಶಿಸಲು ಬಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭೇಟಿಗೆ 30 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಆರೋಪವನ್ನು ಟಿಎಂಸಿ (TMC) ವಕ್ತಾರ ಸಾಕೇತ್‌ ಗೋಖಲೆ ಮಾಡಿದ್ದಾರೆ. 

ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಅವರು ಡಿಸೆಂಬರ್ 1 ರಂದು ಕೆಲವು ಗುಜರಾತಿ ಪತ್ರಿಕೆಗಳ ತುಣುಕುಗಳನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಅವರ ಕೆಲವು ಗಂಟೆಗಳ ಭೇಟಿಯ ಒಟ್ಟು ವೆಚ್ಚ 30 ಕೋಟಿ ರೂ. ಆಗಿದೆ ಎಂದು ಟ್ವೀಟ್‌ ಮಾಡಿದ್ದರು. 

(Photo credit: boomlive.in)

ಮೊರ್ಬಿಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರ ಸ್ವಾಗತ, ಕಾರ್ಯಕ್ರಮ ನಿರ್ವಹಣೆ ಮತ್ತು ಛಾಯಾಗ್ರಹಣಕ್ಕಾಗಿ 5.5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಅವಘಡದಲ್ಲಿ ಮೃತಪಟ್ಟ 135 ಜನರ ಕುಟುಂಬಗಳಿಗೆ ಸರ್ಕಾರ 4 ಲಕ್ಷ ಪರಿಹಾರ ನೀಡಿದ್ದು, ಅದರ ಒಟ್ಟು ಮೊತ್ತ 5 ಕೋಟಿ ಆಗಿದೆ. 135 ಮಂದಿ ಸಂತ್ರಸ್ತ ಕುಟುಂಬಗಳಿಗೆ ನೀಡಿದ ಪರಿಹಾರಕ್ಕಿಂತ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ನಿರ್ವಹಣೆಯ ವೆಚ್ಚ ಹೆಚ್ಚಾಗಿದೆ ಎಂದು ಆರ್‌ಟಿಐ ಮೂಲಕ ತಿಳಿದು ಬಂದಿರುವುದಾಗಿ ಸಾಕೇತ್‌ ಗೋಖಲೆ ಹೇಳಿದ್ದರು.

ಈ ಪ್ರತಿಪಾದನೆಯನ್ನು ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಅಲ್ಲಗೆಳೆದಿದ್ದು, ಸಾಕೇತ್   ಹೇಳಿಕೆಯನ್ನು ನಕಲಿ ಎಂದು ಬಣ್ಣಿಸಿದೆ.

ಆರ್‌ಟಿಐ ಒಂದನ್ನು ಉಲ್ಲೇಖಿಸಿ ಪಿಐಬಿ ಟ್ವೀಟ್ ಮಾಡಿ ಬರೆದುಕೊಂಡಿದ್ದು, ಪ್ರಧಾನಿ ಮೋದಿಯವರ ಮೊರ್ಬಿ ಭೇಟಿಯ ವೆಚ್ಚ 30 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಹಕ್ಕು ಸಂಪೂರ್ಣವಾಗಿ ನಕಲಿಯಾಗಿದೆ. ಅಂತಹ ಯಾವುದೇ ಪ್ರಶ್ನೆಗೆ ಆರ್‌ಟಿಐ ಕಾಯ್ದೆಯಡಿ ಉತ್ತರಿಸಲಾಗಿಲ್ಲ ಎಂದು ಪಿಐಬಿ ಹೇಳಿಕೊಂಡಿದೆ.

ಇದನ್ನೂ ಓದಿ: ‘ವಿಡುದಲೈ’ ಚಿತ್ರೀಕರಣದ ವೇಳೆ ಅವಘಡ: ಸಾಹಸ ಕಲಾವಿದ ಎಸ್. ಸುರೇಶ್ ಮೃತ್ಯು

Similar News