ಡಿ. 5ರಿಂದ 12ರ ವರೆಗೆ ಚುನಾವಣಾ ಬಾಂಡ್ ಮಾರಾಟಕ್ಕೆ ಕೇಂದ್ರ ಸರಕಾರ ಅನುಮತಿ

Update: 2022-12-04 18:26 GMT

ಹೊಸದಿಲ್ಲಿ, ಡಿ. 3:  ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಶನಿವಾರ ಡಿಸೆಂಬರ್ 5ರಿಂದ 12ರ ವರೆಗೆ ಹೊಸ ಗವಾಕ್ಷಿಯನ್ನು ತೆರೆದಿದೆ.

ಚುನಾವಣಾ ಬಾಂಡ್‌ಗಳ ಯೋಜನೆಯ ನಿಯಮಗಳಿಗೆ ನವೆಂಬರ್ 7ರಂದು ತಿದ್ದುಪಡಿ ತಂದ ಸುಮಾರು ಒಂದು ತಿಂಗಳ ಬಳಿಕ ಈ ನಿರ್ಧಾರ ಹೊರ ಬಿದ್ದಿದೆ. ಈ ತಿದ್ದುಪಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆಯಲಿರುವ ವರ್ಷದಲ್ಲಿ 15 ದಿನಗಳ ಹೆಚ್ಚುವರಿ ಅವಧಿ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ. 

ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 9ರಿಂದ ನವೆಂಬರ್ 15ರ ವರೆಗೆ ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಗವಾಕ್ಷಿ ತೆರೆಯ ಕೇಂದ್ರ ಸರಕಾರ ಈ ತಿದ್ದುಪಡಿಯನ್ನು ಬಳಸಿಕೊಂಡಿತ್ತು. ಶನಿವಾರದ ಘೋಷಣೆಯು ಡಿಸೆಂಬರ್ 5ರಂದು ನಡೆಯಲಿರುವ ಗುಜರಾತ್ ವಿಧಾನ ಸಭೆಯ ಎರಡನೇ ಹಂತದ ಚುನಾವಣೆಗೆ ಹೊಂದಿಕೆಯಾಗುತ್ತದೆ.

Similar News