ಬಜ್ಪೆ | ಗುರುಪುರ- ಕೈಕಂಬ ಬಳಿ ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ: ಚಾಲಕರಿಬ್ಬರು ಸ್ಥಳದಲ್ಲೇ ಮೃತ್ಯು
Update: 2022-12-05 11:57 IST
ಮಂಗಳೂರು, ಡಿ.5 : ಲಾರಿಗಳೆರಡು ಮುಖಾಮುಖಿಯಾಗಿ ಚಾಲಕರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಗುರುಪುರ- ಕೈಕಂಬ ಬಳಿ ನಡೆದಿದೆ.
ಮೂಡಬಿದ್ರೆ ಕಡೆಯಿಂದ ಮಣ್ಣು ತುಂಬಿಸಿ ತರುತ್ತಿದ್ದ ಲಾರಿ ಗುರುಪುರ ಕಡೆಯಿಂದ ತೆರಳುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇಳಿಜಾರು ಪ್ರದೇಶದಲ್ಲಿ ಅಪಘಾತ ನಡೆದು ಲಾರಿಗಳು ರಸ್ತೆ ಬದಿಯ ಹೊಂಡಕ್ಕೆ ಬಿದ್ದಿವೆ. ಎರಡೂ ಲಾರಿಗಳು ಸಂಪೂರ್ಣವಾಗಿ ಜಖಂ ಆಗಿದ್ದು, ಅಪಘಾತದಿಂದ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಕಾಣಿಸಿಕೊಂಡಿದೆ.
ಜನರು ಸ್ಥಳದಲ್ಲಿ ಜಮಾಯಿಸಿದ್ದು, ಇಬ್ಬರು ಚಾಲಕರ ಮೃತದೇಹ ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಮೆದುಳು ಜ್ವರ ನಿಯಂತ್ರಣಕ್ಕೆ ಇಂದಿನಿಂದ 48 ಲಕ್ಷ ಮಕ್ಕಳಿಗೆ ಲಸಿಕೆ: ಆರೋಗ್ಯ ಸಚಿವ ಡಾ.ಸುಧಾಕರ್