ಎಸ್ಕೆಎಸ್ಸೆಸ್ಸೆಫ್‌ ಮುಲ್ಕಿ ಕ್ಲಸ್ಟರ್ ವತಿಯಿಂದ ಕಲೋತ್ಸವ ಕಾರ್ಯಕ್ರಮ

Update: 2022-12-05 11:36 GMT

ಮುಲ್ಕಿ: ಕ್ಲಸ್ಟರ್ ಸರ್ಗಲಯ ಕಲೋತ್ಸವ ಕಾರ್ಯಕ್ರಮವು ಬೊಳ್ಳೂರು ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ನಲ್ಲಿ ತ್ವಯ್ಯಿಬ್ ಫೈಝಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಎಸ್ಕೆಎಸ್ಸೆಸ್ಸೆಫ್‌ ಮುಲ್ಕಿ ಕ್ಲಸ್ಟರ್ ಕೋಶಾಧಿಕಾರಿ ರಿಶಾನ್ ನೆರೆವೇರಿಸಿದರು. ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷರಾದ ಅಬೂಬಕ್ಕರ್ ಮದನಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.

ಎಸ್ಕೆಎಸ್ಸೆಸ್ಸೆಫ್‌ ಮುಲ್ಕಿ ಕ್ಲಸ್ಟರ್ "ಸರ್ಗಲಯ ಕಲೋತ್ಸವ 2K22" ಚಾಂಪಿಯನ್ನಾಗಿ ಎಸ್ಕೆಎಸ್ಸೆಸ್ಸೆಫ್‌ ಹಳೆಯಂಗಡಿ ಶಾಖೆ ಹಾಗೂ ರನ್ನರ್ಸ್ ಆಗಿ ಕೊಲ್ನಾಡ್ ಶಾಖೆ ಪಡೆದುಕೊಂಡಿತು. ಮಕ್ಕಳ ಕಲಾ ಸಾಹಿತ್ಯ ಕಾರ್ಯಕ್ರಮ ನಡೆಯಿತು. ಮೂರು ಶಾಖೆಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭ ರಶೀದ್ ಮುಸ್ಲಿಯಾರ್ ಸಂತಕಟ್ಟೆ, ಇಮ್ರಾನ್ ಮಕ್ದೂಮಿ ಇಂದಿರಾನಗರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ಎಂ. ಇಸ್ಮಾಯಿಲ್ ಕೊಲ್ನಾಡ್, ಯಾಸೀರ್ ಕೊಲ್ನಾಡ್, ಅಲ್ಫಾಝ್ ಇಂದಿರಾನಗರ, ಗೌಸ್ ಇಂದಿರಾನಗರ, ಶಾಹಿರ್ ಕೊಲ್ನಾಡ್, ಉಸ್ಮಾನ್ ಸಾಗ್, ತಮೀಮ್ ಬೊಳ್ಳೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಿಶಾನ್ ಇಂದಿರಾನಗರ ಸ್ವಾಗತಿಸಿ, ತ್ವಯ್ಯಿಬ್ ಫೈಝಿ ವಂದಿಸಿದರು.

Similar News