ಮುಡಿಪು: ಆಟೋ ರಾಜಕನ್ಮಾರ್ ಯೂನಿಯನ್ ವಾರ್ಷಿಕೋತ್ಸವ

Update: 2022-12-05 16:36 GMT

ಕೊಣಾಜೆ: ಉತ್ತಮವಾದ ವ್ಯಕ್ತಿತ್ವದೊಂದಿಗೆ ನಾವು ಮೊದಲು ಮಾನವನಾಗಬೇಕು.  ಮಾನವ ಮತ್ತು ಸಮಾಜ ಅವಿನಾಭಾವ ಸಂಬಂಧ ಇರುವಂತಹದ್ದು. ದೀನದಲಿತರಲ್ಲಿ, ಅಶಕ್ತರಲ್ಲಿ, ಬಡವರಲ್ಲಿ  ದೇವರನ್ನು ಕಾಣುವ ಮನೋಭಾವ ನಮ್ಮದಾಗಬೇಕು. ಅಟೋ ಚಾಲಕರು ಸಮಾಜಕ್ಕೆ ಆಪ್ತರಾಗಿರುತ್ತಾರೆ. ರಿಕ್ಷಾ ಚಾಲಕರು ಏರ್ಪಡಿಸಿರುವ ಸೌಹಾರ್ದ ಸಂಗಮ‌ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ  ಎಂದು  ಮುಡಿಪು ಭಾರತಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ ಶಿಕ್ಷಕರಾದ ಶಶಿಕಲಾ ಜಿ.ಭಟ್ ಅವರು ಹೇಳಿದರು.

ಅವರು ಮುಡಿಪುವಿನಲ್ಲಿ ರವಿವಾರ ಆಟೋ ರಾಜಕನ್ಮಾರ್ ಯೂನಿಯನ್ ದ.ಕ ಜಿಲ್ಲೆ ಇದರ 5ನೇ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ, ಸೌಹಾರ್ದ ಸಂಗಮ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿದರು.

ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್, ಸಮಸ್ಯೆಯಿಲ್ಲದ ಸಮಾಜವಿಲ್ಲ,  ನೆಮ್ಮದಿಯಿಂದ ಸಮಸ್ಯೆಯನ್ನು ಬಗೆಹರಿಸುವಂತಹ ತಾಳ್ಮೆ ಎಲ್ಲರಲ್ಲೂ ಬೆಳೆಯಲಿ. ರಿಕ್ಷಾ ಚಾಲಕರು ತಮ್ಮ ಮಕ್ಕಳಿಗೆ ಉನ್ನತ ವ್ಯಾಸಾಂಗ  ಒದಗಿಸಿ, ಅವರ ಭವಿಷ್ಯವನ್ನು ರೂಪಿಸುವಲ್ಲಿ ಹೆಚ್ಚಿನ ಶ್ರಮವಹಿಸಿರಿ ಎಂದರು.

ಎಐಟಿಯುಸಿ ಕೇರಳ ರಾಜ್ಯ ಉಪಾಧ್ಯಕ್ಷ ಮುಸ್ತಫಾ ಎಂ.ಕಡಂಬಾರು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಆಟೋ ಚಾಲಕರು ಎಂದರೆ ಸಮಾಜದ ಆಪತ್ಬಾಂಧವರು. ಊರಿನ ಸೌಹಾರ್ದತೆ, ಐಕ್ಯತೆಯನ್ನು ಬೆಳೆಸುವಲ್ಲಿ ಇವರ ಪಾತ್ರ ಅಮೂಲ್ಯವಾದುದು ಎಂದರು.

ಹ್ಯುಮಾನಿಟಿ ಟ್ರಸ್ಟ್ ನ ಸಂಸ್ಥಾಪಕ ರೋಷಣ್ ಬೆಳ್ಮಣ್ಣ್ , ಮಹಮ್ಮದ್ ಫಯಾಝ್ ಕೆ.ಸಿ.ರೋಡ್, ನಿವೃತ್ತ ಶಿಕ್ಷಕಿ ಶಾರದಾ ಪಿ   ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಆಟೋ ಕನ್ಮಾರ್ ಯೂನಿಯನ್ ಅಧ್ಯಕ್ಷರಾದ ಸಿದ್ದೀಕ್ ಕೊಡಕ್ಕಲ್ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ,  ಕುರ್ನಾಡು ಗ್ರಾ.ಪಂ.ಅಧ್ಯಕ್ಷರಾದ ಗಣೇಶ್ ನಾಯ್ಕ್,  ಕಾನೂನು ಸಲಹೆಗಾರ ಅಬು ಹಾರೀಸ್ , ಸಚಿನ್ ಮಾರ್ಕೆಲ್,  ಇಲ್ಯಾಸ್ ಎಂಎನ್ ಜಿ, ವಕೀಲರಾದ ಆಸ್ಗರ್ ಸಾಂಬರತೋಟ, ಎಸ್ ಡಿಪಿ ಐ ಲತೀಫ್ ಕೋಡಿಜಾಲ್, ಕರಾವಳಿ ಅಟೋಪಾರ್ಕ್ ಅಧ್ಯಕ್ಷರಾದ  ಪ್ರಸಾದ್ ಕುರ್ನಾಡು, ಅಹ್ಮದ್ ಕುಂಞಿ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಬೋಳಿಯಾರ್, ಕೊಣಾಜೆ ಕಾರ್ಯಕಾರಿ ಸಮಿತಿ ಸದಸ್ಯ ವಸಂತ ಕೊಣಾಜೆ,  ಬಶೀರ್ ಅಹ್ಮದ್, ಉಸ್ಮಾನ್ ಮೊಂಟೆಪದವು, ಅಬ್ದುಲ್ ಜಲೀಲದ ಮೋಂಟುಗೋಳಿ, ಬಾದ್ ಷಾ ಸಾಂಬಾರ್ ತೋಟ, ಉಪಾಧ್ಯಕ್ಷರು ಸಾಗರ್ ಕೊಣಾಜೆ, ಸಂಚಾಲಕರು ತಾಜುದ್ದೀನ್ ನಾಟೆಕಲ್  ಹಾಗೂ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಮೋಹನ್ ಶಿರ್ಲಾಲು ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರ.ಕಾ ಅಬ್ದುಲ್ ಜಲೀಲ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು.

ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಿಂದ  ಮುಡಿಪು ಜಂಕ್ಷನ್ನಿನವರೆಗೆ  ನಡೆದ ಬೃಹತ್ ರ್ಯಾಲಿಯಲ್ಲಿ ಮಂಗಳೂರು, ಉಳ್ಳಾಲ, ಮಂಜೇಶ್ವರ, ಬಂಟ್ವಾಳ ತಾಲೂಕಿನ ವ್ಯಾಪ್ತಿಯ 60 ರಿಕ್ಷಾ ಪಾರ್ಕಿ‌ನ 300ಕ್ಕೂ ಅಧಿಕ ರಿಕ್ಷಾ ಭಾಗವಹಿಸಿದ್ದವು.

Similar News