ಹರೇಕಳ ಗ್ರಾಮ ದೇಶದಲ್ಲೇ ಮಾದರಿ ಗ್ರಾಮವಾಗಿ ರೂಪುಗೊಳ್ಳಲಿದೆ: ಯು.ಟಿ.ಖಾದರ್

ಹರೇಕಳ ಗ್ರಾಮ ಸೌಧ ಉದ್ಘಾಟನೆ

Update: 2022-12-05 17:33 GMT

ಕೊಣಾಜೆ: ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಒಂದು ಸುಸಜ್ಜಿತವಾದ ಹರೇಕಳ ಗ್ರಾಮ ಸೌಧ ನಿರ್ಮಾಣಗೊಂಡು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಸುಸಜ್ಜಿತ ಗ್ರಾಮ ಸೌಧ ಮಾತ್ರವಲ್ಲ ವ್ಯವಸ್ಥಿತವಾದ ಆಸ್ಪತ್ರೆ, ತ್ಯಾಜ್ಯವಿಲೇವಾರಿ ಘಟಕ, ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಂಡಿದ್ದು ಮಾದರಿ ಗ್ರಾಮವಾಗಿ ಮಾತ್ರವಲ್ಲದೆ ಪ್ರವಾಸೋದ್ಯಮ ಕ್ಷೇತ್ರವಾಗಿ ಹರೇಕಳ ರೂಪುಗೊಳ್ಳಲಿದೆ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರು ಹೇಳಿದರು.

ಅವರು ಸೋಮವಾರ ಹರೇಕಳ ಗ್ರಾಮ ಪಂಚಾಯತಿಯ ನೂತನ ಪಂಚಾಯತಿ ಕಟ್ಟಡ ಹರೇಕಳ ಗ್ರಾಮ ಸೌಧದ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು.

ಮೂಲಭೂತ ಸೌಲಭ್ಯಗಳ ಮೂಲಕ ನಿರ್ಮಾಣಗೊಂಡಿರುವ ಈ ಸೌಧವು ಗ್ರಾಮದ ಪ್ರತಿಯೊಬ್ಬನಿಗೂ ಆತ್ಮವಿಶ್ವಾಸ  ತುಂಬುವ ಜೊತೆಗೆ ಸೌಹಾರ್ದತೆಯ  ಕೇಂದ್ರವಾಗಬೇಕು ಎಂದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ ಹರೇಕಳ ಅವರು ಮಾತನಾಡಿ, ಹರೇಕಳ ಗ್ರಾಮ ಇಡೀ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಮುಂದಿನ ದಿನಗಳಲ್ಲಿ ಹರೇಕಳ ಗ್ರಾಮ ಪಂಚಾಯತಿ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು, ಅಣೆಕಟ್ಟು ಸಹಿತ ಸೇತುವೆಯೂ ಇಲ್ಲಿ ನಿರ್ಮಾಣಗೊಂಡಿದ್ದು ಮುಂದಿನ ದಿನಗಳಲ್ಲಿ ಹರೇಕಳ ಪ್ರವಾಸೋದ್ಯಮ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದರು.

ಮೂಡ ಮಾಜಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ಅವರು ಮಾತನಾಡಿ, ಹರೇಕಳ ಗ್ರಾಮ ಸೌಹಾರ್ದತೆಯ ನೆಲೆವೀಡು. ಇದೀಗ ನೂತನವಾಗಿ ನಿರ್ಮಾಣವಾಗಿರುವ ಹರೇಕಳ ಗ್ರಾಮ ಸೌಧ ಸೌಹಾರ್ದತೆಯ ಸಂಕೇತವಾಗಿ ರೂಪುಗೊಳ್ಳಲಿ ಎಂದರು.

ಬರಕಾ ಸಂಸ್ಥೆಯ  ಕಾರ್ಯನಿರ್ವಹಣಾ ಅಧಿಕಾರಿ ನಶಲ್ , ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ರಂಝಿನಾ , ಉಪಾಧ್ಯಕ್ಷ ಕಲ್ಯಾಣಿ, ಇ.ಒ,ರಾಜಣ್ಣ , ಅರಸಿಕೆರೆ ಕಾರ್ಯನಿರ್ವಾಹಕ ಅಭಿಯಂತರರಾದ  ನಾಗರಾಜ್, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಮುಸ್ತಫಾ ಮಲಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ತಾ.ಪಂ. ಅಧ್ಯಕ್ಷರಾದ ಮಹಮ್ಮದ್ ಮೋನು, ಕಾರ್ಪೋರೇಟರ್ ಲತೀಫ್ , ಮುನ್ನೂರು ಗ್ರಾಮದ ಅಧ್ಯಕ್ಷರಾದ ವಿಲ್ಪ್ರೆಡ್, ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಸುದರ್ಶನ ಶೆಟ್ಟಿ, ಎನ್.ಎಸ್.ಕರೀಂ, ಪಾವೂರು ಪಂಚಾಯಿತಿ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಬೆಳ್ಮ ಗ್ರಾಮ ಪಂಚಾಯತಿ ಅಧ್ಯಕ್ಷ ಸತ್ತಾರ್, ಜಬ್ಬಾರ್ ಬೋಳಿಯಾರ್, ಬಶೀರ್, ಅಚ್ಯುತ ಗಟ್ಟಿ, ಜಯರಾಮ ಆಳ್ವ ಪೋಡಾರ್, ಕೊಣಾಜೆ ಗ್ರಾ.ಪಂ.ಅಧ್ಯಕ್ಷರಾದ ಚಂಚಲಾಕ್ಷಿ, ಸುಧಾಕರ ಗಟ್ಟಿ, ಇಂತಿಯಾಝ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ  ಯಶವಂತ್ ಬೆಳ್ಚಾಡ, ಕಾರ್ಯದರ್ಶಿ ತಾರಾಕ್ಷಿ  ಮೊದಲಾದವರು ಉಪಸ್ಥಿತರಿದ್ದರು.

ಹರೇಕಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬದ್ರುದ್ದೀನ್ ಹರೇಕಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತ್ಯಾಗಂ ಹರೇಕಳ, ಭಾಗ್ಯರಾಜ್ ಅವರು ನಿರೂಪಿಸಿದರು.

Similar News