ದೇರಳಕಟ್ಟೆ: ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶೇಷ ಚೇತನ‌‌ ಮಕ್ಕಳ ದಿನಾಚರಣೆ

Update: 2022-12-06 09:07 GMT

ಉಳ್ಳಾಲ: ಒಂದು ಮನೆಯಲ್ಲಿ ದಿವ್ಯಾಂಗ ಅಥವಾ ವಿಶೇಷ ಚೇತನ ಮಕ್ಕಳಿದ್ದರೆ ಅವರನ್ನು ನಿಭಾಯಿಸುವುದು ಸುಲಭದ‌ ಮಾತಲ್ಲ. ಆದರೆ ಪೋಷಕರು ತಮ್ಮ ಜೀವನವನ್ನೇ ಆ ಮಕ್ಕಳ ಬದುಕಿಗೆ ಮುಡಿಪಾಗಿಟ್ಟು ಅವರನ್ನು ಪೋಷಿಸುವುದು ದೇವರ ಕೆಲಸಕ್ಕೆ ಸಮಾನ ಎಂದು ಮಂಗಳೂರು ದಕ್ಷಿಣ ವಲಯ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್. ಅಭಿಪ್ರಾಯಪಟ್ಟರು. 

ದೇರಳಕಟ್ಟೆ ನಿಟ್ಟೆ ಪರಿಗಣಿತ ವಿವಿಯ ಅಧೀನದ ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಮಹಾ ವಿದ್ಯಾಲಯ, ನಿಟ್ಟೆ ವಿಶೇಷ ಮಕ್ಕಳ ವಿಭಾಗದ ಸಹಯೋಗದಲ್ಲಿ ನಿಟ್ಟೆ ದಂತ ವಿದ್ಯಾಲಯ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಐಯತ್ ಆಶ್ರಯದಲ್ಲಿ ವಿಶ್ವ ವಿಶೇಷ ಚೇತನ ಮಕ್ಕಳ ದಿನ ಪ್ರಯುಕ್ತ ವಿವಿಧ ಸಲಕರಣೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಇತರ ಮಕ್ಕಳಂತೆ ವಿಶೇಷ ಚೇತನ ಮಕ್ಕಳಿಗೂ ಸಮಾನ ಶಿಕ್ಷಣ, ಸಮಾನ ಅವಕಾಶ ಸಿಗುವಂತೆ ಮಾಡುವುದು‌ ಶಿಕ್ಷಣ ಇಲಾಖೆಯ ಜವಾಬ್ದಾರಿ ಆಗಿದ್ದು, ನಿಟ್ಟೆ ವಿಶ್ವವಿದ್ಯಾಲಯ ಕೈಜೋಡಿಸಿರುವುದು ಶ್ಲಾಘನೀಯ ಎಂದು ಹೇಳಿದರು. ‌

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಶೈಕ್ಷಣಿಕ ಸಹ ಕುಲಾಧಿಪತಿ ಪ್ರೊ. ಡಾ.ಎಂ. ಶಾಂತರಾಮ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಇತ್ತೀಚಿನ ಲೆಕ್ಕಾಚಾರದಂತೆ ಭಾರತದ ಜನಸಂಖ್ಯೆಯಲ್ಲಿ 2.2ಶೇ.ರಷ್ಟು ವಿಶಿಷ್ಟ ಚೇತನರನ್ನು‌ ಗುರುತಿಸಲಾಗಿದೆ.‌ ಅವರಿಗೆ ಅನುಕಂಪಕ್ಕಿಂತ ಸಮಾಜದಲ್ಲಿ ಇತರರಂತೆ ಬದುಕುವ ಅವಕಾಶ ಕಲ್ಪಿಸಬೇಕಿದ್ದು ಪ್ರತಿಯೊಬ್ಬರ ಜವಾಬ್ದಾರಿ. ನಿಟ್ಟೆ ವಿವಿ ಆಶ್ರಯದಲ್ಲಿ ಕಳೆದ 43 ವರ್ಷಗಳಿಂದ ವಿಶಿಷ್ಟ ಚೇತನ‌ ಮಕ್ಕಳ ಸೇವೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು. 

ಕ್ಷೇಮ ಮೆಡಿಕಲ್ ಅಕಾಡಮಿಯ ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ ಶೆಟ್ಟಿ, ಸಮಗ್ರ ಶಿಕ್ಷಣ ಕರ್ನಾಟಕ ಉಪ ಯೋಜನಾ ಧಿಕಾರಿ ಡಾ. ಸುಮಂಗಲಾ ಎಸ್.ನಾಯಕ್, ಡಾ. ಅಮರಶ್ರೀ ಶೆಟ್ಟಿ, ಡಾ. ಕವಿತಾ ರೈ ಹಾಗೂ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ‌ ಡಾ. ಪ್ರಶಾಂತ್ ಕುಮಾರ್ ಕೆ.ಎಸ್  ಉಪಸ್ಥಿತರಿದ್ದರು.  

ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನ‌ಮಹಾವಿದ್ಯಾಲಯದ ಡೀನ್ ಹಾಗೂ ಪ್ರಿನ್ಸಿಪಾಲ್ ಡಾ.ಯು.ಎಸ್. ಕೃಷ್ಣ ನಾಯಕ್ ಸ್ವಾಗತಿಸಿದರು. ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ತರಬೇತುದಾರರಾದ ಕಿಶೋರಿ ವಂದಿಸಿದರು. ದಿವ್ಯದರ್ಶಿನಿ ಕಾರ್ಯಕ್ರಮ ನಿರೂಪಿಸಿದರು.

Similar News