ಮಂಗಳೂರು: ಡಾ.ಬಿ.ಆರ್. ಅಂಬೇಡ್ಕರ್‌ರ ಪರಿನಿರ್ವಾಣ ಕಾರ್ಯಕ್ರಮ

Update: 2022-12-06 13:31 GMT

ಮಂಗಳೂರು: ಭಾರತವನ್ನು ಎಲ್ಲಾ ರೀತಿಯ ತಾರತಮ್ಯಗಳಿಂದ ಮುಕ್ತಗೊಳಿಸಲು ಕೆಲಸ ಮಾಡುವುದು ಡಾ.ಬಿ.ಆರ್. ಅಂಬೇಡ್ಕರ್‌ಗೆ ಗೌರವ ಸಲ್ಲಿಸುವ ಏಕೈಕ ಸತ್ಯ ಮಾರ್ಗವಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ  ಡಾ.ಬಿ.ಆರ್. ಅಂಬೇಡ್ಕರ್‌ರ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್‌ರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಬಳಿಕ ಅವರು ಮಾತನಾಡುತ್ತಿದ್ದರು.

ಅಂಬೇಡ್ಕರ್ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ದಲಿತರು ಹಾಗೂ ಕೆಳಜಾತಿಗಳ ಹಕ್ಕುಗಳಿಗಾಗಿ ಹೋರಾಡಿದರು. ಭಾರತದ ಸಂವಿಧಾನವನ್ನು ರಚಿಸುವ ವೇಳೆ ತುಳಿತಕ್ಕೆ ಒಳಗಾದ, ಸಾಮಾಜಿಕ ನ್ಯಾಯ ವಂಚಿತ ಮತ್ತು ಅವಕಾಶ ವಂಚಿತರಿಗಾಗಿ ವಿಶೇಷ ಕಾಳಜಿ ವಹಿಸಿ ಗಮನಾರ್ಹ ಕೊಡುಗೆ ನೀಡಿದರು. ದೇಶದಲ್ಲಿ ಎಲ್ಲಾ ಬಗೆಯ ತಾರತಮ್ಯಗಳನ್ನು ಇಲ್ಲವಾಗಿಸಲು ಕಾರ್ಯೋನ್ಮುಖರಾಗುವುದು ಅಂಬೇಡ್ಕರ್‌ಗೆ ನಿಜವಾಗಿ ಗೌರವ ಸಲ್ಲಿಸಿದಂತೆ ಎಂದು ಸ್ಮರಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಮಾತನಾಡಿದರು.

ಈ ಸಂದರ್ಭ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜೊಕ್ಕಿಂ ಡಿಸೋಜ, ಬಿ.ಎಂ.ಅಬ್ಬಾಸ್ ಅಲಿ, ಪುರುಷೋತ್ತಮ ಚಿತ್ರಾಪುರ, ಅಬ್ದುರ‌್ರವೂಫ್, ಲತೀಫ್ ಕಂದಕ್, ಕೇಶವ ಮರೋಳಿ, ಸಂತೋಷ್ ಕುಮಾರ್ ಶೆಟ್ಟಿ, ಶುಭೋದಯ ಆಳ್ವ, ಟಿ.ಕೆ.ಸುಧೀರ್, ಸಬಿತಾ ಮಿಸ್ಕಿತ್, ಅಲ್ತಾಫ್ ಸುರತ್ಕಲ್, ಟಿ.ಹೊನ್ನಯ್ಯ, ಪ್ರಕಾಶ್ ಆಲ್ವಿನ್, ಸಿ.ಎಂ ಮುಸ್ತಫಾ, ಮುಹಮ್ಮದ್ ಬಪ್ಪಳಿಗೆ, ಸಲೀಂ ಪಾಂಡೇಶ್ವರ, ಅಬ್ದುರ‌್ರಹ್ಮಾನ್ ಪಡ್ಪು, ಹುಸೈನ್ ಕಾಟಿಪಳ್ಳ, ಶರೀಫ್ ಮೇಗಿಲಪದವು, ಯೋಗೀಶ್ ನಾಯಕ್, ಮಲ್ಲಿಕಾರ್ಜುನ ಕೋಡಿಕಲ್, ರಘು ಪೂಜಾರಿ, ಅಬ್ದುರ‌್ರಹ್ಮಾನ್ ವೀರಕಂಬ, ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

Similar News