ಉಡುಪಿ ಜಿಲ್ಲೆಯ ಶೇ.27.42 ಮಕ್ಕಳಿಗೆ ಜೆಇ ಲಸಿಕೆ: ಆರೋಗ್ಯ ಇಲಾಖೆ

Update: 2022-12-06 15:47 GMT

ಉಡುಪಿ, ಡಿ.6: ಒಂದು ವರ್ಷದಿಂದ 15 ವರ್ಷದೊಳಗಿನ ಮಕ್ಕಳಿಗೆ  ಮೆದುಳು ಜ್ವರ (ಜೆ.ಇ.) ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ  ನೀಡಲಾಗುತ್ತಿ ರುವ ಜೆ.ಇ. ಲಸಿಕೆಯನ್ನು ಅಭಿಯಾನದ ಎರಡನೇ ದಿನದ ಕೊನೆಗೆ ಒಟ್ಟು ಶೇ.27.42ರಷ್ಟು ಮಕ್ಕಳಿಗೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. 

ಡಿ.5ರಿಂದ  24ರವರೆಗೆ ಒಂದರಿಂದ 15 ವರ್ಷದೊಳಗಿನ ಜಿಲ್ಲೆಯ 2,18,324 ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ನಡೆದಿದ್ದು, ಮಂಗಳವಾರ ಸಂಜೆಯವರೆಗೆ ಒಟ್ಟು 59,8723 (ಶೇ.27.42) ಮಕ್ಕಳಿಗೆ ನೀಡಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ ತಿಳಿಸಿದ್ದಾರೆ. 

ಉಡುಪಿ ತಾಲೂಕಿನ 1,01,087 ಮಕ್ಕಳಲ್ಲಿ 25,536 (ಶೇ.25.26), ಕುಂದಾಪುರ ತಾಲೂಕಿನ 76,715 ಮಕ್ಕಳಲ್ಲಿ 22,282 (ಶೇ.29.05) ಹಾಗೂ ಕಾರ್ಕಳ ತಾಲೂಕಿನ 40,522 ಮಕ್ಕಳಲ್ಲಿ 12,054(ಶೇ.29.75) ಮಕ್ಕಳಿಗೆ ಜೆ.ಇ. ಲಸಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Similar News