ಮಾಹೆ ರಿಜಿಸ್ಟ್ರಾರ್ ಆಗಿ ಡಾ.ಗಿರಿಧರ್ ಕಿಣಿ

Update: 2022-12-06 15:50 GMT

ಮಣಿಪಾಲ, ಡಿ.6: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಎಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮಾಹೆಯ ಅಡ್ಮಿಶನ್ ವಿಭಾಗದ ನಿರ್ದೇಶಕ ಡಾ. ಪಿ. ಗಿರಿಧರ್ ಕಿಣಿ, ಮಣಿಪಾಲ ಮಾಹೆಯ ನೂತನ ಕುಲಸಚಿವರಾಗಿ (ರಿಜಿಸ್ಟ್ರಾರ್) ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು. 

ಡಾ.ಗಿರಿಧರ್ ಕಿಣಿ ಅವರು ಡಿ.1ರಂದು ಡಾ.ನಾರಾಯಣ ಸಭಾಹಿತ್ ಅವರಿಂದ ಮಾಹೆ ಕುಲಸಚಿವರಾಗಿ ಆಧಿಕಾರ ಸ್ವೀಕರಿಸಿದರು. ಇದೇ ವೇಳೆ ಡಾ.ಸಭಾಹಿತ್ ಅವರು ಮಾಹೆಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹಕುಲಪತಿಗಳಾಗಿ ನೇಮಕಗೊಂಡಿದ್ದಾರೆ. 

ಎಲೆಕ್ಟ್ರಿಕಲ್ ಎಂಡ್ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂ.ಟೆಕ್ ಹಾಗೂ ಪಿಎಚ್‌ಡಿ ಪದವಿ ಪಡೆದಿರುವ ಡಾ.ಕಿಣಿ, 1999ರಲ್ಲಿ ತಾವು ಓದಿದ ಎಂಐಟಿಯಲ್ಲೇ ಉಪನ್ಯಾಸಕ ವೃತ್ತಿಯನ್ನು ಪ್ರಾರಂಭಿಸಿದ್ದರು. ಬಳಿಕ ವಿವಿಧ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2012ರಿಂದ ಜೈಪುರದ ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ ಸಹ ಕಾರ್ಯ ನಿರ್ವಹಿಸಿದ್ದರು. 2013ರಿಂದ 2017 ರವರೆಗೆ ಎಂಐಟಿಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 

Similar News