ನೈತಿಕ ಪೊಲೀಸ್ ಘಟಕ ರದ್ದಾಗಿಲ್ಲ: ಇರಾನ್ ಸ್ಪಷ್ಟನೆ

Update: 2022-12-06 16:23 GMT

ಟೆಹ್ರಾನ್, ಡಿ.6: ಇರಾನ್‍(Iran)ನ `ನೈತಿಕ(ಸದಾಚಾರ) ಪೊಲೀಸ್' ಘಟಕವನ್ನು ರದ್ದುಗೊಳಿಸಲಾಗಿದೆ ಎಂಬ ವರದಿಯನ್ನು ಇರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ.

ನೈತಿಕ ಪೊಲೀಸ್ ಘಟಕವನ್ನು ಮುಚ್ಚಲಾಗಿದೆ ಎಂಬ ವರದಿಯನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‍(Islamic Republic of Iran)ನ ಯಾವುದೇ ಅಧಿಕಾರಿ ದೃಢಪಡಿಸಿಲ್ಲ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಹೇಳಿದೆ. ಕೆಲವು ವಿದೇಶಿ ಮಾಧ್ಯಮಗಳು ಅಟಾರ್ನಿ ಜನರಲ್ ಅವರ ಹೇಳಿಕೆಯನ್ನು `ಇತ್ತೀಚಿನ ಗಲಭೆಯಿಂದ ಪ್ರಭಾವಿತಗೊಂಡ ಇಸ್ಲಾಮಿಕ್ ರಿಪಬ್ಲಿಕ್ ತನ್ನ ಹಿಜಾಬ್(Hijab) ಕಾನೂನನ್ನು ಹಿಂಪಡೆದಿದೆ' ಎಂದು ತಿರುಚಿವೆ ಎಂದು ಟಿವಿ ವಾಹಿನಿ ಪ್ರತಿಪಾದಿಸಿದೆ. 

Similar News