ಡಿ.8ರಿಂದ ಮೇಲಂಗಡಿಯಲ್ಲಿ ಆತ್ಮೀಯ ಸಮಾಗಮ
Update: 2022-12-06 22:36 IST
ಮಂಗಳೂರು, ಡಿ.6: ಉಳ್ಳಾಲದ ಮೇಲಂಗಡಿಯ ಎಸ್‌ವೈಎಸ್-ಎಸೆಸ್ಸೆಫ್ ವತಿಯಿಂದ ಡಿ.8ರಿಂದ 13ರವರೆಗೆ ಉಳ್ಳಾಲ ದರ್ಗಾ ಮುಖ್ಯ ರಸ್ತೆಯ ಬಿಸ್ಮಿಲ್ಲಾ ಕಾಂಪೌಂಡ್‌ನ ಅಹ್ಮದ್ ಬಾವಾ ಉಸ್ತಾದ್ ನಗರದ, ತಾಯಕ್ಕೋಡ್ ಉಸ್ತಾದ್ ಸಭಾಂಗಣದ, ತಾಜುಲ್ ಉಲಮಾ ವೇದಿಕೆಯಲ್ಲಿ ‘ಆತ್ಮೀಯ ಸಮಾಗಮ’ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬುರ್ದಾ ಮಜ್ಲಿಸ್, ಮದನಿ ಮೌಲಿದ್, ತಾಜುಲ್ ಉಲಮಾ ಮೌಲಿದ್, ಮುಹಿಯ್ಯುದ್ದೀನ್ ಮಾಲೆ, ನಾರಿಯತುಸ್ಸಲಾತ್ ಮಜ್ಲಿಸ್, ಅನುಸ್ಮರಣಾ ಸಂಗಮ, ಜಲಾಲಿಯ್ಯಾ ರಾತೀಬ್, ಮದನೀಯಂ ಮಜ್ಲಿಸ್ ಇತ್ಯಾದಿ ಜರಗಲಿದೆ ಎಂದು ಪ್ರಕಟನೆ ತಿಳಿಸಿದೆ.