ನಿತೀಶ್ ಕುಮಾರ್ ಷಂಡತನದ ಬಲಿಪಶು: ಕೇಂದ್ರ ಸಚಿವ ಅಶ್ವಿನಿ ಚೌಬೆ

Update: 2022-12-07 17:24 GMT

ಪಾಟ್ನಾ, ಡಿ. 7: ರಾಜ್ಯ ಸರಕಾರದ ಅಪರಾಧಗಳ ದಾಖಲೆಗಳನ್ನು ಟೀಕಿಸುವ ಸಂದರ್ಭ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಅವರು ‘ಷಂಡತನದ ಬಲಿಪಶು’ (victim of adultery)ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ(Ashwini Chaubey) ಹೇಳಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ‘‘ನಾನು ಇದನ್ನು ಹೇಳುವ ಕಾರಣವೇನೆಂದರೆ, ರಾಜ್ಯದಲ್ಲಿ ಕಳೆದ ಎಂರಡು ದಿನಗಳಿಂದ ಜನರು ಹತ್ಯೆಗೀಡಾಗುತ್ತಿದ್ದಾರೆ. 

ರಾಜ್ಯದ ಎಲ್ಲೆಡೆಯಿಂದ ಅಪರಾಧದ ವರದಿಗಳು ಬರುತ್ತಿವೆ. ಆದರೆ, ಸರಕಾರ ಸಂಪೂರ್ಣವಾಗಿ ಸಂವೇದನೆ ರಹಿತವಾಗಿದೆ’’ ಎಂದರು. ಮಹಿಳೆಯೋರ್ವರ ಮನೆಗೆ ದುಷ್ಕರ್ಮಿಗಳು ಬಲವಂತವಾಗಿ ಪ್ರವೇಶಿಸಿದ್ದಾರೆ ಹಾಗೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯರು ತಮ್ಮ ಕೈಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. 

ಎರಡು ದಿನಗಳಲ್ಲಿ 6 ಅಪರಾಧ ಪ್ರಕರಣಗಳು ದಾಖಲಾಗಿವೆ. ಆದುದರಿಂದ ನಿಮಗೆ ಇನ್ನು ಮುಂದೆ ಬಿಹಾರದ ಆಡಳಿತ ನಡೆಸಲು ಸಾಧ್ಯವಾಗದು ಎಂದು ನಾನು ನಿತೀಶ್ ಜಿ ಅವರಿಗೆ ತಿಳಿಸಲು ಬಯಸುತ್ತೇನೆ. ನೀವು ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ಚೌಬೆ ಅವರು ಈ ಹೇಳಿಕೆ ನೀಡಿದ್ದಾರೆ.

 ಭಾಗಲ್ಪುರದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಇಬ್ಬರು ದುಷ್ಕರ್ಮಿಗಳು ಮಹಿಳೆಯೋರ್ವರ ಮೇಲೆ ದಾಳಿ ಮಾಡಿ ಕೈ ಹಾಗೂ ಸ್ತನಗಳನ್ನು ಕತ್ತರಿಸಿದ ಪರಿಣಾಮ ಆಕೆ ಮೃತಪಟ್ಟ ಆಘಾತಕಾರಿ ಘಟನೆ ಕೂಡ ಇದರಲ್ಲಿ ಸೇರಿದೆ.

Similar News