ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಟೈಮ್ಸ್ ‘ವರ್ಷದ ವ್ಯಕ್ತಿ’

Update: 2022-12-07 17:29 GMT

ನ್ಯೂಯಾರ್ಕ್, ಡಿ.7: ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಹಾಗೂ ‘ಉಕ್ರೇನ್‌ನ ಚೇತನ’ವನ್ನು 2022ರ ವರ್ಷದ ವ್ಯಕ್ತಿಯಾಗಿ ಟೈಮ್ಸ್ ಪತ್ರಿಕೆ ಆಯ್ಕೆ ಮಾಡಿದೆ.

 ರಶ್ಯದ ವಿನಾಶಕಾರಿ ಆಕ್ರಮಣವನ್ನು ವಿರೋಧಿಸುವಲ್ಲಿ ಅವರು ತೋರಿದ ಧೈರ್ಯ ಮತ್ತು ಉಕ್ರೇನಿಯನ್ನರನ್ನು ಹುರಿದುಂಬಿಸಿದ ಅವರ ನಡೆ ಜಾಗತಿಕ ಪ್ರಶಂಸೆ ಗಳಿಸಿದೆ. ಉಕ್ರೇನ್‌ಗಾಗಿನ ಯುದ್ಧವು ಭಯದಿಂದ ತುಂಬಿರಲಿ, ಅಥವಾ ವಿಶ್ವಾಸದಿಂದ ಕೂಡಿರಲಿ, ಝೆಲೆನ್‌ಸ್ಕಿ ಅವರು ದಶಕಗಳಲ್ಲಿ ನಾವು ನೋಡದ ರೀತಿಯಲ್ಲಿ ಜಗತ್ತನ್ನು ಉತ್ತೇಜಿಸಿದರು ಎಂದು ಟೈಮ್ಸ್‌ನ ಪ್ರಧಾನ ಸಂಪಾದಕ ಎಡ್ವರ್ಡ್ ಫೆಲ್ಸೆಂಥಲ್ ಹೇಳಿದ್ದಾರೆ.

Similar News