ಅಂತರ್ ರಾಷ್ಟ್ರೀಯ ಫುಟ್ಬಾಲ್ ನಿಂದ ಬೆಲ್ಜಿಯಮ್ ಸ್ಟಾರ್ ಹಝಾರ್ಡ್ ನಿವೃತ್ತಿ

Update: 2022-12-07 17:42 GMT

ಬ್ರಸ್ಸಲ್ಸ್, ಡಿ.7: ಬೆಲ್ಜಿಯಮ್ ಸ್ಟಾರ್ ಆಟಗಾರ ಈಡನ್ ಹಝಾರ್ಡ್ ಅಂತರ್ರಾಷ್ಟ್ರೀಯ ಫುಟ್ಬಾಲ್ ನಿಂದ ಬುಧವಾರ ನಿವೃತ್ತಿಯಾಗಿದ್ದಾರೆ.

31ರ ಹರೆಯದ ಹಝಾರ್ಡ್ ಬೆಲ್ಜಿಯಮ್ ಪರ 126 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, 33 ಗೋಲುಗಳನ್ನು ಗಳಿಸಿದ್ದಾರೆ.

‘‘ಇಂದು ನಾನು ಪುಟವನ್ನು ತಿರುಗಿಸುತ್ತಿರುವೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಿಮ್ಮ ಅಪ್ರತಿಮ ಬೆಂಬಲಕ್ಕೆ ಧನ್ಯವಾದಗಳು, 2008ರಿಂದ ನಾವು ಹಂಚಿಕೊಂಡ ಎಲ್ಲಾ ಸಂತೋಷದಾಯಕ ಕ್ಷಣಗಳಿಗಾಗಿಯೂ ಧನ್ಯವಾದಗಳು’’ ಎಂದು ಇನ್ಸ್ಟಾಗ್ರಾಮ್ನಲ್ಲಿ ಹಝಾರ್ಡ್ ಬರೆದಿದ್ದಾರೆ.

2018ರಲ್ಲಿ ರಶ್ಯದಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದ ಬೆಲ್ಜಿಯಮ್ ಖತರ್ನಲ್ಲಿ ಈಗ ನಡೆಯುತ್ತಿರುವ ವಿಶ್ವಕಪ್ನ ಮೊದಲ ಹಂತದಲ್ಲೇ ಸೋತು ನಿರ್ಗಮಿಸಿದೆ. ಮೊರೊಕ್ಕೊ ಹಾಗೂ ಕ್ರೊಯೇಶಿಯ ತಂಡಗಳ ಬಳಿಕ ಗ್ರೂಪ್ ಎಫ್ನಲ್ಲಿ ಮೂರನೇ ಸ್ಥಾನ ಪಡೆದಿತ್ತು.

Similar News