ಹಿಮಾಚಲದಲ್ಲಿ ಮೂವರು ಬಂಡಾಯ ಅಭ್ಯರ್ಥಿಗಳಿಗೆ ಮುನ್ನಡೆ

Update: 2022-12-08 04:45 GMT

ಹೊಸದಿಲ್ಲಿ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ. ಈ ರಾಜ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಬಿಜೆಪಿಯ ಇಬ್ಬರು ಬಂಡಾಯಗಾರರು ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಶಿಶ್ ಕುಮಾರ್ ಕೂಡ ಮುನ್ನಡೆಯಲ್ಲಿದ್ದಾರೆ.

ನಲಗಢದಲ್ಲಿ ಬಿಜೆಪಿ ಬಂಡಾಯ ನಾಯಕ ಕೆ.ಎಲ್. ಠಾಕೂರ್ ಮುನ್ನಡೆಯಲ್ಲಿದ್ದರೆ,  ಡೆಹ್ರಾದಲ್ಲಿ ಬಿಜೆಪಿ ಬಂಡಾಯ ನಾಯಕ ಹೋಶಿಯಾರ್ ಸಿಂಗ್ ಲೀಡ್ ನಲ್ಲಿದ್ದಾರೆ.

ಹಮೀರ್‌ಪುರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಶಿಶ್ ಕುಮಾರ್ ಮುಂದಿದ್ದಾರೆ ಎಂದು NDTV ವರದಿ ಮಾಡಿದೆ.

ಇದನ್ನೂ ಓದಿ: ರಾಜಕೀಯ ಬಿಟ್ಟು ಕೂಲಿ ಮಾಡಿಕೊಂಡು ಬೇಕಾದ್ರೆ ಇರುತ್ತೇನೆ, ಮತ್ತೆ ಕಾಂಗ್ರೆಸ್ ಸೇರಲ್ಲ: ಸಚಿವ ಮುನಿರತ್ನ

Similar News