ಭೀಕರ ಸೇತುವೆ ಕುಸಿತ ಸಂಭವಿಸಿದ ಮೊರ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಜಯ

Update: 2022-12-08 09:18 GMT

ಮೊರ್ಬಿ: ಗುಜರಾತ್‌ನಲ್ಲಿ ತನ್ನ ಅತ್ಯುತ್ತಮ ಫಲಿತಾಂಶದತ್ತ ಸಾಗುತ್ತಿರುವ ಆಡಳಿತಾರೂಢ ಬಿಜೆಪಿ ಮೊರ್ಬಿ ಕ್ಷೇತ್ರವನ್ನು ಉಳಿಸಿಕೊಂಡಿದೆ. ಮೊರ್ಬಿಯಲ್ಲಿ ಅಕ್ಟೋಬರ್ 30 ರಂದು ಭೀಕರ ತೂಗು ಸೇತುವೆ ಕುಸಿತದ ಘಟನೆಯಲ್ಲಿ 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

ಸೇತುವೆ ದುರಂತದ ನಂತರ ಗಮನ ಸೆಳೆದಿರುವ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿರುವ ಬಿಜೆಪಿಯ ಕಾಂತಿಭಾಯಿ ಅಮೃತಯ್ಯ ಅವರು ಗೆಲುವು ಸಾಧಿಸಿದ್ದಾರೆ.

ಮೋರ್ಬಿಯಲ್ಲಿ ಸ್ಥಳೀಯ ಆಡಳಿತವು ಸೇತುವೆ ದುರಸ್ತಿ ಹಾಗೂ  ನಿರ್ವಹಣೆಗಾಗಿ ಖಾಸಗಿ ಕಂಪನಿಯನ್ನು ನೇಮಿಸಿಕೊಳ್ಳುವಾಗ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ.

ಅಮೃತಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ಜಯಂತಿಲಾಲ್ ಪಟೇಲ್ ಅವರಿಗಿಂತ 62,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಸೇತುವೆ ದುರಂತಕ್ಕೆ ಕಾರಣವಾದ ಲೋಪಗಳ ಬಗ್ಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡ ಆಮ್ ಆದ್ಮಿ ಪಕ್ಷದ (ಎಎಪಿ) ಪಂಕಜ್ ರಂಸಾರಿಯಾ ಮೂರನೇ ಸ್ಥಾನದಲ್ಲಿದ್ದಾರೆ.

Similar News