×
Ad

ಸಂಧ್ಯಾ ಪೈಗೆ ‘ವಿಶ್ವಪ್ರಭಾ ಪುರಸ್ಕಾರ’

Update: 2022-12-08 19:15 IST

ಉಡುಪಿ, ಡಿ.8: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇವರ ವತಿಯಿಂದ ಪ್ರಭಾವತಿ ಶೆಣೈ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ ಪುರಸ್ಕಾರ’ಕ್ಕೆ ಮಣಿಪಾಲದ ಹಿರಿಯ ಪತ್ರಕರ್ತೆ ಹಾಗೂ ತರಂಗದ ವ್ಯವಸ್ಥಾಪಕ ನಿರ್ದೇಶಕಿ, ಸಾಹಿತಿ ಸಂಧ್ಯಾ ಪೈ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ಪ್ರಶಸ್ತಿ ಪತ್ರ, ಫಲಕ ಹಾಗೂ  ಒಂದು ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ. ಮುಂಬರುವ ಜನವರಿ ತಿಂಗಳಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು  ಪ್ರಶಸ್ತಿ ಸಮಿತಿಯ ಸಂಚಾಲಕ ಮರವಂತೆ ನಾಗರಾಜ ಹೆಬ್ಬಾರ್ ತಿಳಿಸಿದ್ದಾರೆ.

ಈ ಪ್ರಯುಕ್ತ ಕಾರ್ಕಳ ಯಕ್ಷ ರಂಗಾಯಣದ ಕಲಾವಿದರಿಂದ ಶಶಿರಾಜ್ ರಾವ್ ಕಾವೂರ್ ರಚಿಸಿದ ಡಾ. ಜೀವನ್‌ ರಾಮ್ ಸುಳ್ಯ ನಿರ್ದೇಶನದ ‘ಪರಶುರಾಮ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನಾಗರಾಜ ಹೆಬ್ಬಾರ್ ಹೇಳಿದ್ದಾರೆ. 

Similar News