ನೇತ್ರಜ್ಯೋತಿ ಕಾಲೇಜಿನ ಹೊಸ ಬ್ಯಾಚ್ ಉದ್ಘಾಟನೆ

Update: 2022-12-08 13:47 GMT

ಉಡುಪಿ, ಡಿ.8: ಉಡುಪಿಯ ಪ್ರಸಿದ್ಧ ಕಣ್ಣಿನಾಸ್ಪತ್ರೆ ‘ಪ್ರಸಾದ್ ನೇತ್ರಾಲಯ’ ದ ಅಂಗ ಸಂಸ್ಥೆ ನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಎಲೈಡ್ ಹೆಲ್ತ್ ಅಂಡ್ ಪ್ಯಾರಾಮೆಡಿಕಲ್ ಸೈನ್ಸ್ ಉಡುಪಿ ಇದರ 2022-23ನೇ ಸಾಲಿನ ಬ್ಯಾಚ್ ಉದ್ಘಾಟನೆ ಮತ್ತು ಓರಿಯೆಂಟೇಶನ್ ಕಾರ್ಯಕ್ರಮವನ್ನು ಡಾ.ಎ.ವಿ.ಬಾಳಿಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಅವರು ಅರೆ ವೈದ್ಯಕೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಡವಳಿಕೆ, ಶಿಸ್ತು, ಸಮಯ ಪ್ರಜ್ಞೆ, ಸಂವಹನ, ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ, ವೈದ್ಯಕೀಯ ಸೇವಾ ಮನೋಭಾವನೆ, ಸಮುದಾಯದ ಬಗ್ಗೆ ಕಾಳಜಿ, ವಿದ್ಯಾರ್ಥಿಗಳಲ್ಲಿ ಮೊಬೈಲ್ ಗಳ ಸದ್ಬಳಕೆ ಹಾಗೂ ದುರ್ಬಳಕೆ, ಕ್ರೀಡೆ ಮತ್ತು ಆರೋಗ್ಯದ ಬಗ್ಗೆ ಕಾಳಜಿಯ ಕುರಿತಂತೆ ಮಾರ್ಗದರ್ಶನ ನೀಡಿದರು.

ನೇತ್ರಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ನಾಡೋಜ ಡಾ. ಕೃಷ್ಣ ಪ್ರಸಾದ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅರೆ ವೈದ್ಯಕೀಯ ಮತ್ತು ಎಲೈಡ್ ಹೆಲ್ತ್ ಆಂಡ್ ಪ್ಯಾರಾಮೆಡಿಕಲ್ ಸೈನ್ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿರುವ ಬೇಡಿಕೆ ಮತ್ತು ವಿಪುಲ  ಅವಕಾಶ ಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.

ಸಮಾರಂಭದಲ್ಲಿ ನೇತ್ರಜ್ಯೋತಿ ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್,  ಆಸ್ಪತ್ರೆಯ ಆಡಳಿತಾಧಿಕಾರಿ ಎಂ.ವಿ. ಆಚಾರ್ಯ, ಪ್ರಾಂಶುಪಾಲರಾದ  ರಾಜೀಬ್ ಮಂಡಲ್, ಕಾಲೇಜಿನ ಆಡಳಿತ ಅಧಿಕಾರಿ ಅಬ್ದುಲ್ ಖಾದರ್, ಉಪ ಪ್ರಾಂಶುಪಾಲೆ ಸುಪ್ರೀತ, ಸಂಸ್ಥೆಯ ಆಕಾಡೆಮಿಕ್ ಕೋ-ಆರ್ಡಿನೇಟರ್  ಬಾಲಕೃಷ್ಣ ಉಪಸ್ಥಿತರಿದ್ದರು.

Similar News