ಡಿ. 9ರಿಂದ ವಾದಿರಾಜ ಕನಕದಾಸ ಸಂಗೀತೋತ್ಸವ

Update: 2022-12-08 16:03 GMT

ಉಡುಪಿ, ಡಿ.8: 44ನೇ ವರ್ಷದ ವಾದಿರಾಜ ಕನಕದಾಸ ಸಂಗೀತೋತ್ಸವ ಕಾರ್ಯಕ್ರಮ ಡಿ. 9 ಮತ್ತು 10ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಉಡುಪಿ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಸಂಸ್ಥೆ ಗಳು ಸಂಯುಕ್ತವಾಗಿ ಸಂಘಟಿಸಿವೆ. 

ಡಿ.9ರಂದು ಸಂಜೆ 4 ಗಂಟೆಗೆ ಉಡುಪಿಯ ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ.ಬಿ. ಗೋಪಾಲಾಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಂಜೆ 5 ರಿಂದ ರಮಾ ಪ್ರಭಾಕರ್ ಪುತ್ತೂರು ಮತ್ತು ಬಳಗದವರಿಂದ ಕರ್ನಾಟಕ ಸಂಗೀತ ಕಚೇರಿ  ನಡೆಯಲಿದೆ.

ಡಿ.10ರ ಬೆಳಗ್ಗೆ 9 ರಿಂದ ಸಂಚಾರಿ ಸಂಗೀತಕಾರರಾದ  ಆಂಜನೇಯ ಮತ್ತು ಧರ್ಮಣ್ಣ ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 10:30ಕ್ಕೆ ಕಾರ್ಕಳದ ಅನಂತಪದ್ಮನಾಭ ಭಟ್ ಮತ್ತು ಬಳಗ ದಿಂದ ‘ಶ್ರೀ ಕನಕದಾಸರು’ ಎಂಬ ವಿಷಯದ ಕುರಿತು ಹರಿಕಥಾ ಕಾಲಕ್ಷೇಪ ನಡೆಯಲಿದೆ.

ಅಪರಾಹ್ನ 2 ರಿಂದ  ಸ್ಪರ್ಧಾ ವಿಜೇತರಿಂದ ವಾದಿರಾಜ ಕನಕದಾಸ  ಕೀರ್ತನೆಗಳ ಗಾಯನ, 4 ಕ್ಕೆ ಸಮಾರೋಪ ಸಮಾರಂಭ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಅಧ್ಯಕ್ಷತೆಯನ್ನು ಡಾ.ಟಿ.ಎಂಎ ಪೈ ಪೊಲಿಟೆಕ್ನಿಕ್ ಮಣಿಪಾಲದ  ನಿರ್ದೇಶಕ ಪ್ರೊ. ಟಿ. ರಂಗ ಪೈ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಎಂಜಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾದ ಮಾಲತಿ ದೇವಿ ಭಾಗವಹಿಸುವರು.  ಸಂಜೆ 5 ರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.

Similar News