ಜಾಮೀನು ದೊರೆತ ಬೆನ್ನಲ್ಲೇ ಗುಜರಾತ್ ಪೊಲೀಸರಿಂದ ಸಾಕೇತ್ ಗೋಖಲೆ ಮತ್ತೆ ಬಂಧನ

ಡೆರೆಕ್ ಓಬ್ರಿಯಾನ್ ಆರೋಪ

Update: 2022-12-08 17:48 GMT

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರ ಸಾಕೇತ್ ಗೋಖಲೆ ಅವರಿಗೆ ಜಾಮೀನು ನೀಡಿದ ನಂತರವೂ ಗುಜರಾತ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಿಯಾನ್ ಗುರುವಾರ ಆರೋಪಿಸಿದ್ದಾರೆ.  ಸೇತುವೆ ಕುಸಿತದ ಘಟನೆಯ ನಂತರ ಮೋರ್ಬಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಗ್ಗೆ ಸುಳ್ಳು ಸುದ್ದಿಯನ್ನು ಟ್ವೀಟ್ ಮಾಡಿದ ಆರೋಪದ ಮೇಲೆ ಸಾಕೇತ್ ಗೋಖಲೆ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.

"ಜಾಮೀನು ಪಡೆದ ನಂತರವೂ ಟಿಎಂಸಿಯ ಸಾಕೇತ್ ಗೋಖಲೆ ಅವರಿಗೆ ಗುಜರಾತ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ.  ಡಿಸೆಂಬರ್ 8 ರಂದು ರಾತ್ರಿ 8.45 ಕ್ಕೆ ಮತ್ತೆ ಬಂಧಿಸಲಾಗಿದೆ. ಅವರು ಅಹಮದಾಬಾದ್‌ನ ಸೈಬರ್ ಪಿಎಸ್‌ನಿಂದ ಹೊರಡುತ್ತಿದ್ದಾಗ, ಯಾವುದೇ ಸೂಚನೆ/ವಾರೆಂಟ್ ಇಲ್ಲದೆ ಪೊಲೀಸ್ ತಂಡವು ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯುತ್ತಿದ್ದಾರೆ.  ಖಂಡನೀಯ" ಎಂದು ಡೆರೆಕ್ ಒ'ಬ್ರಿಯಾನ್ ಗುರುವಾರ ಟ್ವೀಟ್ ಮಾಡಿದ್ದಾರೆ.

Similar News