ಸೋನಿಯಾ ಗಾಂಧಿ ಜನ್ಮದಿನ ಪ್ರಯುಕ್ತ ದಿನಸಿ ಸಾಮಗ್ರಿ ವಿತರಣೆ

Update: 2022-12-09 17:25 GMT

ಮಂಗಳೂರು, ಡಿ.9: ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯ ಜನ್ಮದಿನದ ಪ್ರಯುಕ್ತ ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರ ನೇತೃತ್ವದಲ್ಲಿ ಶುಕ್ರವಾರ ನಗರದ ಕುದ್ಕೋರಿ ಗುಡ್ಡ ಕಾಲನಿಯ ಅರ್ಹ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭ ರಾಜ್ಯ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಅಪ್ಪಿ, ಸುರೇಖಾ ಚಂದ್ರಹಾಸ್, ಮಲ್ಲಿಕಾ ಪಕ್ಕಳ, ಚಂದ್ರಕಲಾ ಡಿ.ರಾವ್, ಬ್ಲಾಕ್ ಅಧ್ಯಕ್ಷರಾದ ಶಶಿಕಲಾ ಪದ್ಮನಾಭ್, ಶಾಂತಲಾ ಗಟ್ಟಿ, ಚಂದ್ರಿಕಾ ರೈ, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ ಪದಾಧಿಕಾರಿಗಳಾದ ಗೀತಾ ಅತ್ತಾವರ್, ಉಷಾ ಶರತ್, ಸುನೀತಾ ಲೋಬೊ, ಗೀತಾ ಪ್ರವೀಣ್, ವಿದ್ಯಾ, ಕಲಾವತಿ, ರಾಜ್ಯ ಯುವ ಕಾಂಗ್ರೆಸ್‌ಕಾರ್ಯದರ್ಶಿ ಆಶಿತ್ ಪಿರೇರಾ, ಯುವ ನಾಯಕ ದೀಕ್ಷಿತ್ ಅತ್ತಾವರ್, ಸ್ಥಳೀಯರಾದ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

Similar News