ಕರಾವಳಿಯ ಮೀನುಗಾರರ ಸಮಸ್ಯೆಗಳ ಬಗ್ಗೆ ಸಮಾಲೋಚನಾ ಸಭೆ

Update: 2022-12-09 17:26 GMT

ಮಂಗಳೂರು : ಕರಾವಳಿ ಭಾಗದ ಮೀನುಗಾರರ ಸಮಸ್ಯೆಯನ್ನು ಪ್ರಸ್ತುತ ಆಡಳಿತ ಸರಕಾರ ನಿರ್ಲಕ್ಷಿಸಿದೆ. ಅದನ್ನು ಖಂಡಿಸಿ, ಪ್ರತಿಭಟನೆಗೆ ಮುಂದಾಗಿರುವ ಮೀನುಗಾರಿಕೆ ನಡೆಸುವ ಮುಖಂಡರ ಜೊತೆ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಶುಕ್ರವಾರ ಸಭೆಯನ್ನು ನಡೆಸಲಾಯಿತು.

ಮೀನುಗಾರಿಕೆಗೆ ಸಂಬಂಧಿಸಿ ಸರಕಾರ ಸಬ್ಸಿಡಿಯನ್ನು ನೀಡದೆ ಅನ್ಯಾಯ ಎಸಗಿದೆ. ಡೀಸೆಲ್ ಮತ್ತು ಸೀಮೆಎಣ್ಣೆಯನ್ನು ಸಕಾಲಕ್ಕೆ ನೀಡುತ್ತಿಲ್ಲ. ದ.ಕ. ಜಿಲ್ಲೆಯ ಮೀನುಗಾರರಿಗೆ ಯಾವುದೇ ಯೋಜನೆ ರೂಪಿಸುತ್ತಿಲ್ಲ. ಮೀನುಗಾರರ ಅಭಿವೃದ್ಧಿ ನಿಗಮದ ಅಧ್ಯಕ್ಷರ ನೇಮಕವು ಸೂಕ್ತವಾಗಿಲ್ಲ ಇತ್ಯಾದಿಯಾಗಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಆ ಹಿನ್ನೆಲೆಯಲ್ಲಿ  ಮೀನುಗಾರರ ಪರವಾಗಿ ಹೋರಾಟ ರೂಪಿಸಲು ತೀಮಾನಿಸಲಾುತು.

ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು. ಟಿ ಖಾದರ್ ಮಾತನಾಡಿ ಮುಂದಿನ ಅಧಿವೇಶನದಲ್ಲಿ ಕರಾವಳಿ ಮೀನುಗಾರರ ಬಗ್ಗೆ ಸರಕಾರದ ನಿರ್ಲಕ್ಷದ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ್, ಅಶ್ರಫ್ ಕೆ., ದಯಾನಾಥ್, ಮೋಹನ್ ಬೆಂಗ್ರೆ,  ಭುವನೇಶ್ ಕರ್ಕೆರಾ, ಚೇತನ್ ಬೆಂಗ್ರೆ, ಜಗದೀಶ್ ಪುತ್ರನ್, ಸುಭಾಷ್ ಬೋಳಾರ್, ಕವಿತಾ ವಾಸು, ಲೋಕನಾಥ್ ಪುತ್ರನ್, ನವೀನ್ ಕರ್ಕೆರ, ಇಬ್ರಾಹೀಂ, ಸತೀಶ್ ಕೋಟ್ಯಾನ್, ಆಲಿ ಹಸನ್, ಹರಿಶ್ಚಂದ್ರ ಬೆಂಗ್ರೆ, ಗಂಗಾಧರ್ ಉಪಸ್ಥಿತರಿದ್ದರು.

Similar News