ಉಳ್ಳಾಲ ತಾಲೂಕು ಯುವಜನ ಸಮಾವೇಶ

Update: 2022-12-09 17:38 GMT

ಉಳ್ಳಾಲ: ಸೋಲಿಡಾರ್ಟಿ ಯೂತ್ ಮೂವ್ ಮೆಂಟ್ ಇದರ ಆಶ್ರಯದಲ್ಲಿ ತೊಕ್ಕೊಟ್ಟುವಿನಲ್ಲಿ ನಡೆದ ಉಳ್ಳಾಲ ತಾಲೂಕು ಯುವಜನ ಸಮಾವೇಶವನ್ನು ಲಬೀದ್ ಶಾಫಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಯುವಕ ಸಮಾಜದ ಬೆನ್ನೆಲುಬು ಆಗಿ ಕಾರ್ಯ ನಿರ್ವಹಿಸಬೇಕು. ಸಮಾಜದ ಅಭಿವೃದ್ಧಿ ಪರ ನಮ್ಮ ಸೇವೆ ಇರಬೇಕು ಎಂದು ಅವರು ಕರೆ ನೀಡಿದರು.

ಸೊಲಿಡಾರಿಟಿ ಯೂತ್ ಮೂವ್ ಮೆಂಟ್ ಉಪಾಧ್ಯಕ್ಷ ಶುಹೈಬ್ ಸಿ.ಟಿ. ಮಾತನಾಡಿ, ಸಮಾಜದ ಅಭಿವೃದ್ಧಿ ನಮ್ಮ ಗುರಿ ಆಗಬೇಕೇ ಹೊರತು ಅರಾಜಕತೆ ಅಲ್ಲ. ನಮ್ಮ ಸಮಾಜದಲ್ಲಿ ಬಹಳಷ್ಟು ಯುವಕರು ಇದ್ದಾರೆ. ಯುವಕರಿಗೆ ಕೆಲವು ಜವಾಬ್ದಾರಿ ಕೂಡ ಇದೆ. ಉನ್ನತ ಶಿಕ್ಷಣ ಪಡೆಯುವ ಜೊತೆಗೆ ಸಮಸ್ಯೆ ಗೆ ಪರಿಹಾರ ಹುಡುಕುವ ಕಾರ್ಯ ಆಗಬೇಕು.ಪ್ರವಾದಿಯವರು ಇಸ್ಲಾಂ ಧರ್ಮ ಬೋಧನೆ ಮಾಡುವ ಮೂಲಕ ಸಮಾಜಕ್ಕೆ ಹೊಸ  ರೂಪ ರೇಖೆ ನೀಡಿದ್ದರು. ನಾವು ಕೂಡಾ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಉಳ್ಳಾಲ ಅಧ್ಯಕ್ಷ ಡಾ.ಝೈನುದ್ದೀನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ತಪ್ಲೀಲ್ ಅಹ್ಮದ್ ಪೋಸ್ಟರ್ ಬಿಡುಗಡೆ ಮಾಡಿದರು. ಉಪಾಧ್ಯಕ್ಷ ಶುಹೈಬ್ ಸಿ.ಟಿ. ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಅಬ್ದುಲ್ ಸಲಾಂ ಯು., ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್, ಉಳ್ಳಾಲ ಅಧ್ಯಕ್ಷ ಅಬ್ದುಲ್ ಕರೀಂ ಉಪಸ್ಥಿತರಿದ್ದರು. ಅಲ್ ಪುರ್ಖಾನ್ ಅರೆಬಿಕ್ ಇನ್ಸ್ಟಿಟ್ಯೂಟ್ ಅಧ್ಯಾಪಕ ಸುಲ್ತಾನ್ ನಬೀಲ್ ಕಿರಾಅತ್ ಪಠಿಸಿದರು. ರಿಯಾಝ್ ಮಂಗಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Similar News