ಹಾಂಕಾಂಗ್: ಪತ್ರಿಕೋದ್ಯಮಿಗೆ 5 ವರ್ಷ ಜೈಲು

Update: 2022-12-10 16:54 GMT

ಹಾಂಕಾಂಗ್, ಡಿ.10: ವಂಚನೆ ಪ್ರಕರಣದಲ್ಲಿ ಹಾಂಕಾಂಗ್‍(Hong Kong)ನ ಖ್ಯಾತ ಮಾಧ್ಯಮ ಉದ್ಯಮಿ ಜಿಮ್ಮಿ ಲಾಯ್(Jimmy Loy) ಅವರಿಗೆ ಅಲ್ಲಿನ ನ್ಯಾಯಾಲಯ 5 ವರ್ಷ 9 ತಿಂಗಳು ಜೈಲುಶಿಕ್ಷೆ ವಿಧಿಸಿದೆ.

`ಆ್ಯಪಲ್ ಡೈಲಿ'(Apple Daily) ದಿನಪತ್ರಿಕೆಯ ಸ್ಥಾಪಕರಾದ 75 ವರ್ಷದ ಲಾಯ್, ಪ್ರತಿಭಟನೆ ಹಾಗೂ ಅಕ್ರಮವಾಗಿ ಸಭೆ ಸೇರಲು ಜನರಿಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ  ಇತ್ತೀಚೆಗಷ್ಟೇ 20 ತಿಂಗಳ ಜೈಲುಶಿಕ್ಷೆ ಅನುಭವಿಸಿದ್ದರು. ಇದೀಗ ಪತ್ರಿಕಾ ಕಚೇರಿಯ ಲೀಸ್  ಒಪ್ಪಂದದ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 5 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ಜತೆಗೆ 2,57,000 ಡಾಲರ್ ದಂಡ ಹಾಗೂ 8 ವರ್ಷ ಸಂಸ್ಥೆಯ ಆಡಳಿತ ನಿರ್ವಹಿಸುವುದನ್ನು ನಿಷೇಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

 ಇವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿದ್ದು ಇದರಲ್ಲಿ ಅಪರಾಧಿಯೆಂದು ನಿರ್ಣಯಿಸಲ್ಪಟ್ಟರೆ ಜೀವಾವಧಿ ಶಿಕ್ಷೆಗೆ ಗುರಿಯಾಗಲಿದ್ದಾರೆ. 

Similar News