×
Ad

ಬೆಳ್ತಂಗಡಿ: ಅಣಿಯೂರು ಪೇಟೆಯಲ್ಲಿ ಕಾಡಾನೆ; ಜನರಲ್ಲಿ ಆತಂಕ

Update: 2022-12-12 08:50 IST

ಬೆಳ್ತಂಗಡಿ, ಡಿ. 12: ತಾಲೂಕಿನ ಅಣಿಯೂರು ಪೇಟೆಯಲ್ಲಿ ಸೋಮವಾರ ಬೆಳಗ್ಗೆ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಈ ಪ್ರದೆಶದಲ್ಲಿ ಕಳೆದ ಕೆಲವು ಸಮಯದಿಂದ ಒಂಟಿ ಸಲಗವೊಂದು ರಾತ್ರಿ ವೇಳೆ ಕೃಷಿ ನಾಶ ಮಾಡುತ್ತಿತ್ತು. ಇದೀಗ ಹಗಲು ಹೊತ್ತಿನಲ್ಲಿಯೇ ಪೇಟೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ.

ನದಿಯಲ್ಲಿ ಕಾಡಾನೆ ತಿರುಗಾಡುತ್ತಿದ್ದು, ನದಿ ಬದಿಯ ತೋಟಗಳಿಗೆ ಹಾನಿಯುಂಟು ಮಾಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

Similar News