×
Ad

ಸ್ಕೇಟಿಂಗ್: ಶಾಮಿಲ್ ಹರ್ಷದ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Update: 2022-12-14 23:20 IST

ಮಂಗಳೂರು, ಡಿ.14: ಶಿವಗಂಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ಇತ್ತೀಚೆಗೆ ನಡೆದ ಸಿಬಿಎಸ್ಸಿ ಸೌತ್ ಜೋನ್ (ದಕ್ಷಿಣ ಭಾರತ ವಲಯ ಮಟ್ಟದ) ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 16 ವರ್ಷ ಪ್ರಾಯದ ಬಾಲಕರ ಇನ್‌ಲೆನ್ ವಿಭಾಗದಲ್ಲಿ ದ.ಕ. ಜಿಲ್ಲೆಯ ಯೆನೆಪೋಯ ಸಿಬಿಎಸ್ಸಿ ಶಾಲೆಯನ್ನು ಪ್ರತಿನಿಧಿಸಿದ್ದ ಮುಹಮ್ಮದ್ ಶಾಮಿಲ್ ಅರ್ಷದ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

500+ ಡೀ ರಿಂಕ್ ರೇಸ್‌ನಲ್ಲಿ ಚಿನ್ನದ ಪದಕ , 300 ಮೀಟರ್ ಟಿ ಟಿ ರಿಂಕ್ ರೇಸ್‌ನಲ್ಲಿ ಚಿನ್ನದ ಪದಕ ಹಾಗೂ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯು 2023ರ ಜನವರಿಯಲ್ಲಿ ಗುರ್ಗಾಂವ್‌ನಲ್ಲಿ ನಡೆಯಲಿದೆ.

ಮಂಗಳೂರಿನ ಅರ್ಷದ್ ಹುಸೈನ್ ಹಾಗೂ ರಮ್ಲತ್ ಅರ್ಷದ್ ದಂಪತಿಯ ಪುತ್ರನಾಗಿರುವ ಈತ ಯೆನೆಪೋಯ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಹೈ - ಫ್ಲೈಯರ್ಸ್ (ಆರ್) ಸ್ಕೇಟಿಂಗ್ ಕ್ಲಬ್‌ನ ಸ್ಕೇಟರ್ ಆಗಿದ್ದಾರೆ. ಮೋಹನ ದಾಸ್ ಹಾಗೂ ಜಯರಾಜ್‌ರ ಮಾರ್ಗದರ್ಶನದಲ್ಲಿ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

Similar News