ಪಶ್ಚಿಮ ಬಂಗಾಳ: ಆಕಾಶದಲ್ಲಿ ಗೋಚರಿಸಿದ ನಿಗೂಢ ಬೆಳಕು !

Update: 2022-12-15 18:15 GMT

ಕೊಲ್ಕತ್ತಾ: ಸುಮಾರು ಐದು ನಿಮಿಷಗಳ ಕಾಲ, ಕೋಲ್ಕತ್ತಾದ ಆಕಾಶದಲ್ಲಿ ಚಲಿಸುತ್ತಿರುವ ನಿಗೂಢ ಬೆಳಕು ಕಾಣಿಸಿಕೊಂಡಿದೆ. ಬೆಳಕಿನ ಮೂಲವನ್ನು ಇದುವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಇದು ಉಲ್ಕೆಯ ಭಾಗವೇ, ಉಪಗ್ರಹವೇ ಅಥವಾ ಕ್ಷಿಪಣಿಯೇ ಎಂಬುದರ ಬಗ್ಗೆ ತಜ್ಞರಿಗೆ ಇನ್ನೂ ಖಚಿತ ಮಾಹಿತಿ ತಿಳಿದಿಲ್ಲ ಎಂದು hindustantimes ವರದಿ ಮಾಡಿದೆ.  
 
ಸಂಜೆ 5.50 ರಿಂದ 5.55 ರವರೆಗೆ ನಿಗೂಢ ಬೆಳಕು ಆಕಾಶದಲ್ಲು ಗೋಚರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.  ಕೋಲ್ಕತ್ತಾದ ಮಾತ್ರವಲ್ಲದೆ, ಬಂಕುರಾ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ಹೌರಾ, ಹೂಗ್ಲಿ ಮತ್ತು ಒಡಿಶಾದ ಕೆಲವು ಜಿಲ್ಲೆಗಳಲ್ಲೂ ವಿಚಿತ್ರ ಬೆಳಕು ಗೋಚರಿಸಿದೆ. 

ಗುರುವಾರ ಉಡಾವಣೆಯಾದ ಅಗ್ನಿ-5 ನೊಂದಿಗೆ ಈ ನಿಗೂಢ ಬೆಳಕಿಗೆ ಸಂಬಂಧವೇನಾದರೂ ಇದೆಯೇ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.

Similar News