×
Ad

ಕಲ್ಲಡ್ಕ | ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿ-ಯುವಕನನ್ನು ತಡೆದ ಸಂಘಪರಿವಾರದ ಕಾರ್ಯಕರ್ತರು

ಸಂಘಪರಿವಾರದ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಯುವತಿ: ವೀಡಿಯೊ ವೈರಲ್

Update: 2022-12-16 12:30 IST

ಬಂಟ್ವಾಳ, ಡಿ.16:  ಇನ್ನೊಂದು ಧರ್ಮದ ಯುವಕನ ಜೊತೆಯಲ್ಲಿ ಯುವತಿಯೋರ್ವಳು ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಳೆ ಎಂಬ ಕಾರಣಕ್ಕಾಗಿ ಸಂಘಪರಿವಾರದ ಕಾರ್ಯಕರ್ತರು ಬಸ್ ತಡೆದು ನಿಲ್ಲಿಸಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.

ಮಂಗಳೂರಿನಿಂದ ದುರ್ಗಾಂಬಾ ಬಸ್ ನಲ್ಲಿ ಇನ್ನೊಂದು ಧರ್ಮದ ಯುವಕನ ಜೊತೆ ಯುವತಿಯೋರ್ವಳು‌ ಪ್ರಯಾಣಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಘಪರಿವಾರದ ಕಾರ್ಯಕರ್ತರು ದಾಸಕೋಡಿ ಎಂಬಲ್ಲಿ ಬಸ್ ತಡೆದು ನಿಲ್ಲಿಸಿದ್ದಾರೆ. ಆ ಬಳಿಕ ಬಸ್ ನಲ್ಲಿ ಕಾರ್ಯಕರ್ತರು ಹಾಗೂ ಪ್ರಯಾಣಿಕ ರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಂಘಪರಿವಾರದ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಯುವತಿಯ ವೀಡಿಯೊ ವೈರಲ್ ಆಗಿದೆ. 

ಘಟನೆ ನಡೆದ ಸ್ಥಳಕ್ಕೆ ಪೋಲೀಸರು ಆಗಮಿಸಿ ಕಾರ್ಯ ಕರ್ತರು ಹಾಗೂ ಇಬ್ಬರು ಪ್ರಯಾಣಿಕರು ಠಾಣೆಗೆ ತೆರಳಿದ್ದಾರೆ. ಠಾಣೆಯಲ್ಲಿ ಮಾತುಕತೆ ಬಳಿಕ ಮನೆಯವರಿಗೆ ತಿಳಿಸಿ ಮನೆಯವರ ಜೊತೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Similar News