×
Ad

ಆರ್ಜೆಂಟಿನಾ ಫಿಫಾ ವಿಶ್ವಕಪ್‌ ಫೈನಲ್‌ ಪ್ರವೇಶಿಸುತ್ತಿದ್ದಂತೆಯೇ ಟ್ರೆಂಡ್‌ ಆಗುತ್ತಿದೆ ಎಸ್‌ಬಿಐ ಪಾಸ್‌ಬುಕ್‌!

Update: 2022-12-16 17:07 IST

ಹೊಸದಿಲ್ಲಿ: ಲಿಯೊನೆಲ್‌ ಮೆಸ್ಸಿ ಅವರ ಆರ್ಜೆಂಟಿನಾ ತಂಡ ಹಾಗೂ ಫ್ರಾನ್ಸ್‌ ನಡುವೆ ಫಿಫಾ ವಿಶ್ವಕಪ್‌ ಅಂತಿಮ ಹಣಾಹಣಿ ನಡೆಯಲಿರುವ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪಾಸ್‌ಬುಕ್‌ನ ಫೋಟೋ ಒಂದು ಟ್ರೆಂಡಿಂಗ್‌ ಆಗುತ್ತಿದೆ. ಇದಕ್ಕೆ ಕಾರಣ ಈ ಪಾಸ್‌ಬುಕ್‌ ಬಣ್ಣ ಮತ್ತು ಆರ್ಜೆಂಟಿನಾ ತಂಡದ ಜೆರ್ಸಿಯ ಬಣ್ಣ ಒಂದೇ ಆಗಿರುವುದು. ಮೆಸ್ಸಿ ತಂಡವು ಕ್ರೊಯೆಷಿಯ ತಂಡವನ್ನು ಸೋಲಿಸಿ ಫೈನಲ್‌ ಪ್ರವೇಶಿಸುತ್ತಿದ್ದಂತೆಯೇ ಎಸ್‌ಬಿಐ ಪಾಸ್‌ಬುಕ್‌ ಫೋಟೋ ಕೂಡ ಸಾಮಾಜಿಕ ಜಾಲತಾಣಿಗಳಲ್ಲಿ ಸುದ್ದಿಯಾಗಿದೆ. ಆರ್ಜೆಂಟಿನಾ ತಂಡ ಹಾಗೂ ಲಿಯೊನೆಲ್‌ ಮೆಸ್ಸಿಗೆ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರಲ್ಲಿ ಹಲವರು ಟ್ವಿಟರ್‌ನಲ್ಲಿ ಎಸ್‌ಬಿಐ ಪಾಸ್‌ಬುಕ್‌ನ ವಿವಿಧ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. "ಭಾರತೀಯರು ಆರ್ಜೆಂಟಿನಾದ ಅತ್ಯಂತ ದೊಡ್ಡ ಅಭಿಮಾನಿಯಾಗಲು ಕಾರಣ. ಆರ್ಜೆಂಟಿನಾದ ಅಧಿಕೃತ ಪಾಲುದಾರ ಎಸ್‌ಬಿಐ" ಎಂದು ಒಬ್ಬರು ಹಾಸ್ಯಮಿಶ್ರಿತ ಟ್ವೀಟ್‌ ಮಾಡಿದ್ದರೆ ಇನ್ನೊಬ್ಬರು "ಭಾರತೀಯರು ಆರ್ಜೆಂಟಿನಾ ಬೆಂಬಲಿಸಲು ಕಾರಣ- ಆರ್ಜೆಂಟಿನಾ ಸೋತರೆ ಅವರು ಎಲ್ಲಾ ಹಣ ಕಳೆದುಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದಾರೆ," ಎಂದು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.

Similar News