×
Ad

MEIF ವತಿಯಿಂದ ಸುರತ್ಕಲ್ ಝೋನಲ್ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ

Update: 2022-12-17 20:52 IST

ಸುರತ್ಕಲ್: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ. ಹಾಗೂ ಉಡುಪಿ ಜಿಲ್ಲೆ (MEIF) ವತಿಯಿಂದ  ಸುರತ್ಕಲ್ ಝೋನಲ್ ಮಟ್ಟದ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ  "Talent Hunt -2022 -23"ಯು ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರದಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬದ್ರಿಯಾ ಜುಮಾ ಮಸೀದಿ, ಮುಸ್ಲಿಂ ಜಮಾಅತ್ ಕೃಷ್ಣಾಪುರ ಇದರ  ಅಧ್ಯಕ್ಷರಾದ ಬಿ.ಎಂ. ಮುಮ್ತಾಝ್ ಅಲಿ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಅಲ್ ಬದ್ರಿಯಾ  ಆಂಗ್ಲ ಮಾಧ್ಯಮ ಶಾಲೆ ಇದರ ಅಧ್ಯಕ್ಷರಾದ ಅಬೂಬಕ್ಕರ್ ಕೃಷ್ಣಾಪುರ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು MEIF ಅಧ್ಯಕ್ಷರಾದ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿದ್ದರು. MEIF ಪ್ರಧಾನ ಕಾರ್ಯದರ್ಶಿ ಬಿ.ಎ ನಝೀರ್ ಸ್ವಾಗತಿಸಿ,  ಝೋನಲ್ ಕನ್ವಿನರ್ ಬಿ.ಎ. ಇಕ್ಬಾಲ್  ವಂದಿಸಿದರು. ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲರಾದ ವಿಲ್ಮಾ ಡಿಸೋಜಾ ಉಪಸ್ಥಿತರಿದ್ದರು.

ಮುಖ್ಯೋಪಾದ್ಯಾಯರಾದ ಸತೀಶ್ ಕಾರ್ಯಕ್ರಮ ನಿರೂಪಿಸಿದರು. MEIF ಪ್ರೋಗ್ರಾಮ್ ಸೆಕ್ರೆಟರಿ  ರಿಯಾಝ್ ಅಹ್ಮದ್  ಹಾಗೂ MEIF ಮಂಗಳೂರು ಝೋನಲ್ ಕನ್ವಿನರ್ ಮುಹಮ್ಮದ್ ಶಾರಿಕ್ ಪ್ರತಿಭಾ ಸ್ಪರ್ಧೆಗಳನ್ನು  ಸಂಯೋಜಿಸಿದರು.

ಕಾರ್ಯಕ್ರಮದಲ್ಲಿ ಸುರತ್ಕಲ್, ಕೃಷ್ಣಾಪುರ,  ಬೆಂಗ್ರೆ,  ಕಾಟಿಪಳ್ಳ, ಮುಲ್ಕಿ, ಬಜ್ಪೆ, ಜೋಕಟ್ಟೆ ಮತ್ತು ಮೂಡುಬಿದಿರೆ ಪ್ರದೇಶದ MEIF ವಿದ್ಯಾ ಸಂಸ್ಥೆಗಳ 75 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಲ್ಲಾ ಸ್ಪರ್ಧೆಗಳು ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿದ್ದು, ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು 2023 ಜನವರಿ ತಿಂಗಳಿನಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ  ನಡೆಯಲಿರುವ  ಜಿಲ್ಲಾ ಮಟ್ಟದ " Talent Hunt " ನಲ್ಲಿ ಸ್ಪರ್ದಿಸಲಿದ್ದು, ವಿವರಗಳು ಈ ಕೆಳಗಿನಂತಿವೆ.

ಡ್ರಾಯಿಂಗ್ - ಶರೀಫಾ ಫರ್ಹಾನ  (ನೂರುಲ್ ಹುದಾ ಆಂಗ್ಲ ಮಾಧ್ಯಮ ಶಾಲೆ, ಕಾಟಿಪಳ್ಳ)

ಕ್ವಿಝ್ - ಮುಹಮ್ಮದ್ ಶಾಝಿಲ್   & ಆಯಿಶತುಲ್ ಆಫಿಯಾ (ಎ.ಆರ್ .ಕೆ ಆಂಗ್ಲ ಮಾಧ್ಯಮ ಶಾಲೆ ಬೆಂಗರೆ)

ಪಿಕ್ & ಸ್ಪೀಕ್ - ಫೌದ ಅಶ್ಫ  (ಪ್ರೀಚ್ ಪಬ್ಲಿಕ್ ಸ್ಕೂಲ್ ಚೊಕ್ಕಬೆಟ್ಟು)

ಸೈನ್ಸ್ ಮಾಡೆಲ್ - ಬರತ್  & ಅಲೋಕ್ ಸಿಂಗ್   (ನೋಬಲ್  ಆಂಗ್ಲ ಮಾಧ್ಯಮ ಶಾಲೆ ಕುಂಜತ್‌ ಬೈಲ್)

ಮರಿಯಮ್ ಮುಝ್ನ & ಫಾತಿಮಾ ರಿದಾ ಅಲಿ ( ಪ್ರೀಚ್ ಪಬ್ಲಿಕ್ ಸ್ಕೂಲ್ ಚೊಕ್ಕಬೆಟ್ಟು)

ಕಾರ್ಯಕ್ರಮದ ತೀರ್ಪುಗಾರರಾಗಿ  ಹೈದರ್ ಮರ್ದಾಲ (ಪ್ರಾಂಶುಪಾಲರು -ಮನ್ಶರ್ ಪಾರ ಮೆಡಿಕಲ್ ಕಾಲೇಜು ಬೆಳ್ತಂಗಡಿ), ಮಲ್ಲಿಕಾ (ಉಪನ್ಯಾಸಕಿ -ಎಂ. ವಿ ಶೆಟ್ಟಿ ಕಾಲೇಜು ಮಂಗಳೂರು) ಹಾಗೂ ಬರತ್ (ಶಿಕ್ಷಕರು -ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ, ಕಾಟಿಪಳ್ಳ) ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಲ್ ಬದ್ರಿಯಾ  ಆಂಗ್ಲ ಮಾಧ್ಯಮ ಶಾಲೆ ಕೃಷ್ಣಾಪುರ ವಹಿಸಿತ್ತು.

Similar News