×
Ad

ಗೃಹಬಂಧನಕ್ಕೆ ವರ್ಗಾವಣೆ ಕೋರಿ ಪಿಎಫ್‌ಐ ಮಾಜಿ ವರಿಷ್ಠ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Update: 2022-12-19 22:50 IST

ಹೊಸದಿಲ್ಲಿ, ಡಿ. 19: ಅನಾರೋಗ್ಯದ ಹಿನ್ನೆಲೆಯಲ್ಲಿ ಕಾರಾಗೃಹದಿಂದ ಗೃಹಬಂಧನಕ್ಕೆ ವರ್ಗಾಯಿಸುವಂತೆ ಕೋರಿ ಪಿಎಫ್‌ಐ(PFI)ಯ ಮಾಜಿ ವರಿಷ್ಠ ಎರಪ್ಪುಂಗಲ್ ಅಬೂಬಕ್ಕರ್ (Erappungal Abubakar)ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಸೆಪ್ಟಂಬರ್ 22ರಂದು ದೇಶಾದ್ಯಂತ ಪಿಎಫ್‌ಐ ಕಚೇರಿ ಮೇಲೆ ದಾಳಿ ನಡೆಸಿದ ಸಂದರ್ಭ ಅಬೂಬಕ್ಕರ್ ಅವರನ್ನು ಬಂಧಿಸಿತ್ತು. 

ತನಗೆ ಕ್ಯಾನ್ಸರ್ ಹಾಗೂ ಪರ್ಕಿನ್ಸನ್ ಕಾಯಿಲೆ ಇರುವುದರಿಂದ ತುರ್ತು ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯ ಇದೆ ಎಂದು ಅರ್ಜಿಯಲ್ಲಿ ಅಬೂಬಕರ್ ತಿಳಿಸಿದ್ದಾರೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅಬೂಬಕರ್‌ಗೆ ಗೃಹ ಬಂಧನ ವಿಧಿಸಲು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಹಾಗೂ ತಲ್ವಂತ್ ಸಿಂಗ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಿರಾಕರಿಸಿದೆ. 

Similar News