×
Ad

ಗಡಿ ವಿವಾದ: ನೀರು ಪೂರೈಕೆ ಕುರಿತು ಕರ್ನಾಟಕಕ್ಕೆ ಮಹಾರಾಷ್ಟ್ರ ಸಚಿವ ಎಚ್ಚರಿಕೆ

Update: 2022-12-21 22:37 IST

ನಾಗಪುರ, ಡಿ. 21: ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraja Bommai) ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡುವುದನ್ನು ನಿಲ್ಲಿಸದೇ ಇದ್ದರೆ, ತಮ್ಮ ಅಣೆಕಟ್ಟಿನಿಂದ ಕರ್ನಾಟಕಕ್ಕೆ ನೀರು ಪೂರೈಕೆ ಮಾಡುವ ಕುರಿತು ಮರು ಚಿಂತಿಸಬೇಕಾಗಬಹುದು ಎಂದು ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ(Shambhuraj Desai) ಅವರು ಬುಧವಾರ ಹೇಳಿದ್ದಾರೆ.

ಕರ್ನಾಟಕದೊಂದಿಗೆ ಮಹಾರಾಷ್ಟ್ರದ ಗಡಿ ವಿವಾದದ ಕುರಿತ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ತಂಡದೊಂದಿಗೆ ಸಮನ್ವಯ ನಡೆಸಲು ನೋಡೆಲ್ ಸಚಿವರಾಗಿ ಸಂಪುಟ ಸದಸ್ಯರಾದ ಚಂದ್ರಕಾಂತ್ ಪಾಟೀಲ್(Chandrakant Patil) ಹಾಗೂ ಶಂಭುರಾಜ್ ದೇಸಾಯಿ ಅವರನ್ನು ಮಹಾರಾಷ್ಟ್ರ ಸರಕಾರ ಕಳೆದ ತಿಂಗಳು ನಿಯೋಜಿಸಿತ್ತು.

ನಾಗಪುರದ ವಿಧಾನ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇಸಾಯಿ, ಮಹಾರಾಷ್ಟ್ರಕ್ಕೆ ಒಂದು ಇಂಚು ಭೂಮಿಯನ್ನು ಕೂಡ ನೀಡುವುದಿಲ್ಲ ಎಂಬ ಕರ್ನಾಟಕ ಸರಕಾರದ ನಿಲುವಿನ ಕುರಿತಂತೆ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡರು.

Similar News