ತಾಜ್‌ಮಹಲ್‌ ನಲ್ಲಿ ಕೋವಿಡ್‌ ಅಲರ್ಟ್:‌ ಪರೀಕ್ಷಿಸದೇ ಪ್ರವೇಶವಿಲ್ಲ !

Update: 2022-12-22 13:06 GMT

ಆಗ್ರಾ,ಡಿಸೆಂಬರ್ 22: ಚೀನಾ ಮತ್ತು ಇತರ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣದೊಂದಿಗೆ, ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ನಲ್ಲಿ ಈ ಕುರಿತು ಎಚ್ಚರಿಕೆ ವಹಿಸಲು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದೆ.

ಆಗ್ರಾದ ತಾಜ್ ಮಹಲ್ ಅನ್ನು ವೀಕ್ಷಿಸಲು ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಧಿಕೃತ ಮೂಲಗಳ ಪ್ರಕಾರ ಭೇಟಿಯ ಮೊದಲು ಅವರು ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿದು ಬಂದಿದೆ.

ಜಿಲ್ಲಾ ಆರೋಗ್ಯ ಮಾಹಿತಿ ಅಧಿಕಾರಿ (ಆಗ್ರಾ) ಅನಿಲ್ ಸತ್ಸಂಗಿ ಮಾತನಾಡಿ, "ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಈಗಾಗಲೇ ಪರೀಕ್ಷೆಗಳನ್ನು ಪ್ರಾರಂಭಿಸಿದೆ, ಅಲರ್ಟ್ ಆನ್ ಆಗಿರುವುದರಿಂದ, ಈಗ ಎಲ್ಲಾ ಸಂದರ್ಶಕರಿಗೆ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ" ಎಂದು ಹೇಳಿದ್ದಾರೆ.

Similar News