ವಿಮಾನದಲ್ಲಿ ʼಕಿರ್ಪಾನ್ʼ ಒಯ್ಯಲು ಸಿಖ್ಖರಿಗೆ ಅವಕಾಶ ಪ್ರಶ್ನಿಸಿದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Update: 2022-12-22 16:05 GMT

ಹೊಸದಿಲ್ಲಿ, ಡಿ. 22: ದೇಶೀಯ ವಿಮಾನಗಳಲ್ಲಿ ಕಿರ್ಪಾನ್(Kirpan) ಒಯ್ಯುವುದಕ್ಕೆ ಸಿಕ್ಖ್(Sikh) ಪ್ರಯಾಣಿಕರಿಗೆ ಅವಕಾಶ ನೀಡುವ ಸರಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ. ನಾಗರಿಕ ವಾಯು ಯಾನದ ಮಹಾ ನಿರ್ದೇಶಕರು ಮಾರ್ಚ್ 4ರಂದು ಹೊರಡಿಸಿದ ಅಧಿಸೂಚನೆಯನ್ನು ಪ್ರಶ್ನಿಸಿ ನ್ಯಾಯವಾದಿ ಹರ್ಷ ವಿಭೋರೆ ಸಿಂಘಾಲ್(Harsha Vibhore Singhal) ಅವರು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು.

ಈ ಅಧಿಸೂಚನೆ ಸಿಕ್ಖರು ವಿಮಾನದಲ್ಲಿ ಬ್ಲೇಡ್ ನ ಉದ್ದ 6 ಇಂಚುಗಳಿಗಿಂತ ಹಾಗೂ ಒಟ್ಟು ಉದ್ದ 9 ಇಂಚುಗಳಿಗಿಂತ ಹೆಚ್ಚಿರದ ಕಿರ್ಪಾನ್ ಅನ್ನು ವಿಮಾನದಲ್ಲಿ ಕೊಂಡೊಯ್ಯುವುದಕ್ಕೆ ಅವಕಾಶ ನೀಡಿದೆ. ವಿಚಾರಣೆ ಸಂದರ್ಭ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸುಬ್ರಹ್ಮಣೀಯಂ ಪ್ರಸಾದ್ ಅವರನ್ನು ಒಳಗೊಡ ಪೀಠ, ಈ ನಿರ್ಧಾರ ಸರಕಾರದ ನೀತಿಯಾಗಿದೆ.

ಸಂಧಾನಕ್ಕೆ ಅವಕಾಶ ಇಲ್ಲದೇ ಇದ್ದರೆ, ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

Similar News