ಇಂದು ಐಪಿಎಲ್ ಮಿನಿ ಹರಾಜು: ಭಾರತ ಮೂಲದ ಬ್ಯಾಟರ್ ಗಳಿಗೆ ಭಾರಿ ಬೇಡಿಕೆ

Update: 2022-12-23 09:12 GMT

ಕೊಚ್ಚಿ: ಇಂದು (ಶುಕ್ರವಾರ) ಮಧ್ಯಾಹ್ನ 2.30ರಿಂದ ಬಹು ನಿರೀಕ್ಷಿತ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕಾರ್ಯಕ್ರಮವನ್ನು ಕೊಚ್ಚಿಯ ಗ್ರ್ಯಾಂಡ್ ಹಯಾತ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಸ್ಟಾರ್ ಸ್ಫೊರ್ಟ್ಸ್ ನೇರ ಪ್ರಸಾರ ಮಾಡಲಿದ್ದು, ಇದರೊಂದಿಗೆ ಡಿಜಿಟಲ್ ವೇದಿಕೆಯಾದ Viacom18 ಕೂಡಾ ತನ್ನ ಜಿಯೊ ಸಿನಿಮಾ ಒಟಿಟಿ ವೇದಿಕೆಯಲ್ಲಿ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ ಎಂದು indianexpress.com ವರದಿ ಮಾಡಿದೆ.

ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 991 ಆಟಗಾರರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 405 ಆಟಗಾರರು ಮಾತ್ರ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈ ಪಟ್ಟಿಯಲ್ಲಿ 273 ಮಂದಿ ಭಾರತೀಯ ಆಟಗಾರರಿದ್ದರೆ, 132 ಮಂದಿ ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿರುವ ತಂಡಗಳಿಗೆ ಕೇವಲ 87 ಆಟಗಾರರ ಅಗತ್ಯವಿದ್ದು, ಅವರ ಖರೀದಿಗಾಗಿ ಅವು ರೂ. 185.15 ಕೋಟಿ ವೆಚ್ಚ ಮಾಡಬಲ್ಲ ಸಾಮರ್ಥ್ಯ ಹೊಂದಿವೆ.

ಈ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ತಂಡವೂ ತನಗೆ ಎಷ್ಟು ಆಟಗಾರರ ಅಗತ್ಯವಿದೆಯೊ ಅಷ್ಟು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಹೊಂದಿದೆ. ಇದಕ್ಕೆ ಹೋಲಿಸಿದರೆ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಮೂರರಿಂದ ಐದು ಮಂದಿ ಆಟಗಾರರ ಬದಲಾವಣೆಗೆ ಅವಕಾಶವಿತ್ತು. (ಈ ಸಂಖ್ಯೆಯು ಪ್ರತಿ ವರ್ಷವೂ ಬದಲಾಗುತ್ತಿದೆ). ಹೀಗಾಗಿ ಪ್ರತಿ ತಂಡವೂ ವಿಭಿನ್ನ ಮೊತ್ತ ಹಾಗೂ ಅಗತ್ಯದೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿವೆ. ಈಗಾಗಲೇ ತಂಡದಲ್ಲಿ ಸಾಕಷ್ಟು ಬದಲಿ ಆಟಗಾರರನ್ನು ಹೊಂದಿರುವ ತಂಡಗಳು ಕಡಿಮೆ ಮೊತ್ತದೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ, ಮತ್ತೆ ಕೆಲವು ತಂಡಗಳು ದೊಡ್ಡ ಮೊತ್ತದೊಂದಿಗೆ ದೊಡ್ಡ ಸಂಖ್ಯೆಯ ಆಟಗಾರರನ್ನು ಖರೀದಿಸಲು ಮುಂದಾಗಲಿವೆ.

ಉದಾಹರಣೆಗೆ, ಸನ್‌ರೈಸರ್ಸ್ ಹೈದರಾಬಾದ್ ತನ್ನ ತಂಡಕ್ಕೆ 17 ಆಟಗಾರರನ್ನು ಭರ್ತಿ ಮಾಡಬೇಕಿದ್ದು, ಅದಕ್ಕಾಗಿ ರೂ. 42.25 ಕೋಟಿ ಮೊತ್ತವನ್ನು ತೆಗೆದಿರಿಸಿದೆ. ಇನ್ನೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತಂಡಕ್ಕೆ 9 ಮಂದಿ ಆಟಗಾರರನ್ನು ಭರ್ತಿ ಮಾಡಬೇಕಿದ್ದು, ಅದಕ್ಕಾಗಿ ಕೇವಲ ರೂ. 8.75 ಕೋಟಿ ಮೊತ್ತವನ್ನು ತೆಗೆದಿರಿಸಿದೆ. ಈ ಎರಡು ತಂಡಗಳ ನಡುವೆ ಕೋಲ್ಕತ್ತಾ ನೈಟ್‌ರೈಟರ್ಸ್ ತೀರಾ ಇಕ್ಕಟ್ಟಿನ ಸ್ಥಿತಿಯಲ್ಲಿದ್ದು, 14 ಮಂದಿ ಆಟಗಾರರ ಭರ್ತಿಗೆ ಕೇವಲ ರೂ. 7.05 ಕೋಟಿ ಮೊತ್ತ ತೆಗೆದಿರಿಸಿದೆ. ಮತ್ತೊಂದು ಮುಖ್ಯ ಸಂಗತಿಯೆಂದರೆ, ತಂಡಗಳು ಎಲ್ಲ ಬದಲಿ ಆಟಗಾರರ ಸ್ಥಾನವನ್ನು ಭರ್ತಿ ಮಾಡಬೇಕಾದ ಅಗತ್ಯವಿಲ್ಲದಿದ್ದರೂ, ಹಾಗೇನಾದರೂ ಮಾಡಿದರೆ, ಗಾಯಾಳುಗಳ ಸಮಸ್ಯೆಗಳು ತಲೆದೋರಿದಾಗ ಅಂತಹ ತಂತ್ರವು ಅವಕ್ಕೆ ತಿರುಗುಬಾಣವಾಗುವ ಸಾಧ್ಯತೆಯೂ ಇದೆ.

ಈ ವರ್ಷ ಬಹುತೇಕ ತಂಡಗಳು ಭಾರತದ ಅತ್ಯುತ್ತಮ ಬ್ಯಾಟರ್ ಗಳನ್ನು ಉಳಿಸಿಕೊಂಡಿದ್ದು, ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಬ್ಯಾಟರ್ ಗಳ ಲಭ್ಯತೆ ಕೊರತೆ ಹಾಗೂ ಭಾರತದ ಬ್ಯಾಟರ್ ಗಗಳಿಗೆ ವಿಪರೀತ ಬೇಡಿಕೆ ಇರುವುದರಿಂದ ಹರಾಜು ನೋಂದಾಯಿಸಿಕೊಂಡಿರುವ ಆಟಗಾರರು(ಮುಖ್ಯವಾಗಿ ಮಯಾಂಕ್ ಅಗರ್‌ವಾಲ್ ಮಾತ್ರ) ಹೆಚ್ಚು ಸಂಭಾವನೆ ಪಡೆಯುವ ಸಾಧ್ಯತೆ ಇದೆ. ಇದಕ್ಕಾಗಿ ಭಾರತೀಯ ಬ್ಯಾಟರ್ ಗಳ ಗುಣಮಟ್ಟ ಸತ್ವಪರೀಕ್ಷೆಗೊಳಗಾಗಲಿದ್ದು, ಯಾವುದೇ ತಂಡದ ಭವಿಷ್ಯದಲ್ಲಿ ಮುಖ್ಯ ಪಾತ್ರ ವಹಿಸಲಿದೆ.

ಬೌಲಿಂಗ್ ವಿಭಾಗದಲ್ಲಿ ವಿದೇಶದ ವೇಗದ ಬೌಲರ್‌ಗಳು ಡಜನ್‌ಗಟ್ಟಲೆ ಲಭ್ಯವಿದ್ದು, ಅವರಿಗೆ ಹೋಲಿಸಿದರೆ ಭಾರತೀಯ ವೇಗದ ಬೌಲರ್‌ಗಳ ಗುಣಮಟ್ಟ ಇನ್ನೂ ವಿರಳ ಸಂಗತಿಯಾಗಿಯೇ ಉಳಿದಿದೆ. ಹೀಗಿದ್ದೂ ಸಂದೀಪ್ ಶರ್ಮ, ಶಿವಂ ಮಾವಿ, ಇಶಾನ್ ಪೋರೆಲ್ ಮತ್ತು ಅಂಕಿತ್ ರಜಪೂತ್ ಥರದ ವೇಗದ ಬೌಲರ್‌ಗಳು ಆರೋಗ್ಯಕರ ಸಂಭಾವನೆ ಪಡೆಯುವ ಸಾಧ್ಯತೆ ಇದೆ.

ಒಂದು ವೇಳೆ ಎರಡು ಅಥವಾ ಅದಕ್ಕಿಂತ ಹೆಚ್ಚು ತಂಡಗಳು ತಮ್ಮ ಬಳಿ ಖರೀದಿಗಾಗಿ ಹಣ ಉಳಿದಿರದಿದ್ದರೂ ಅಥವಾ ಅವರಲ್ಲಿನ ಹಣ ಖರ್ಚಾಗುವ ಹಂತ ತಲುಪಿದ್ದರೂ ಯಾವುದೇ ಆಟಗಾರನಿಗಾಗಿ ಒಂದೇ ಮೊತ್ತದ ಸಂಭಾವನೆಯನ್ನು ನಮೂದಿಸಿದರೆ, ಅಂತಹ ಸಂದರ್ಭಗಳಲ್ಲಿ ಬಿಸಿಸಿಐ 'ಸೈಲೆಂಟ್ ಟೈ-ಬ್ರೇಕರ್' ಆಯೋಜಿಸಲಿದೆ.

ಅದರನ್ವಯ ಬಹಿರಂಗ ಹರಾಜಿನಲ್ಲಿ ನಮೂದಿಸಲಾಗಿರುವ ಮೊತ್ತಕ್ಕೆ ಸದರಿ ಆಟಗಾರರು ಮಾರಾಟವಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ನಂತರ ಈಗಾಗಲೇ ಘೋಷಿಸಲಾಗಿರುವ ಹರಾಜು ಮೊತ್ತಕ್ಕಿಂತ ಹೆಚ್ಚಿನ ಹರಾಜು ಮೊತ್ತಕ್ಕೆ ಸಂಬಂಧಿಸಿದ ತಂಡಗಳಿಂದ ಲಿಖಿತ ಬಿಡ್ ಆಹ್ವಾನಿಸಲಾಗುತ್ತದೆ. ಈ ಸೈಲೆಂಟ್ ಟೈ-ಬ್ರೇಕರ್‌ನಲ್ಲಿ ಜಯಿಸುವ ತಂಡವು ಸದರಿ ಆಟಗಾರರೊಂದಿಗೆ ಒಪ್ಪಂದಕ್ಕೆ ಸಹಿ ಮಾಡುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ಬಹಿರಂಗ ಹರಾಜಿನಲ್ಲಿ ನಮೂದಾಗಿದ್ದ ಮೊತ್ತವನ್ನು ಹೊರತುಪಡಿಸಿದ ಹೆಚ್ಚುವರಿ ಮೊತ್ತ ಬಿಸಿಸಿಐ ಕಿಸೆ ಸೇರುತ್ತದೆಯೇ ಹೊರತು ಆಟಗಾರನಿಗಲ್ಲ.

Similar News