ಪ್ರಧಾನಿ ಮೋದಿ ಮಹಿಳೆಯರ ಉಡುಪನ್ನು ಧರಿಸಿದ್ದರೇ? ವೈರಲ್‌ ಚಿತ್ರದ ವಾಸ್ತವಾಂಶವೇನು?

Update: 2022-12-23 15:22 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೇಘಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬುಡಕಟ್ಟು ಜನಾಂಗದ ಉಡುಗೆ ತೊಟ್ಟಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಮಹಿಳೆಯರ ಉಡುಪನ್ನು ಪ್ರಧಾನಿ ಮೋದಿ ಅವರು ಧರಿಸಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ.

ಪ್ರಧಾನಿ ಮೋದಿಯವರು ತೊಟ್ಟಿರುವ ಉಡುಪನ್ನು ಆನ್‌ ಲೈನ್‌ ವೆಬ್‌ಸೈಟ್‌ ಒಂದರಲ್ಲಿ ಮಾರಾಟಕ್ಕೆ ಇಟ್ಟಿರುವ $35 (ಭಾರತದಲ್ಲಿ ಅಂದಾಜು 2,893 ರೂ.) ಬೆಲೆಯ ಮಹಿಳೆಯರ ಉಡುಪು ಎಂಬಂತೆ ಹೋಲಿಸಿ ವೈರಲ್‌ ಮಾಡಲಾಗಿದೆ. ಆದರೆ, ಈ ಚಿತ್ರವನ್ನು ಮಾರ್ಫ್ ಮಾಡಲಾಗಿದೆ ಎಂದು BOOMlive.com ವರದಿ ಮಾಡಿದೆ.  ಮೂಲ ಚಿತ್ರವನ್ನು ಇ-ಕಾಮರ್ಸ್ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದ್ದು, ಮೂಲ ಚಿತ್ರದಲ್ಲಿರುವ ವಸ್ತ್ರದ ವಿನ್ಯಾಸ ವಿಭಿನ್ನವಾಗಿದ್ದು, ಪ್ರಧಾನಿ ಮೋದಿ ಧರಿಸಿರುವಂತಹ ವಸ್ತ್ರದ ವಿನ್ಯಾಸದಂತಿಲ್ಲ ಎಂದು ವರದಿ ಹೇಳಿದೆ.

ಪ್ರಧಾನಿ ಮೋದಿ ಅವರು ಡಿಸೆಂಬರ್ 18 ರಂದು ಈಶಾನ್ಯ ಭಾರತದ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಘಾಲಯದ ಶಿಲ್ಲಾಂಗ್‌ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಅಡಿಪಾಯ ಹಾಕಿದ್ದರು. ವರದಿಗಳ ಪ್ರಕಾರ, ಶಿಲ್ಲಾಂಗ್‌ನಲ್ಲಿ ಖಾಸಿಗಳು ಹೆಚ್ಚಾಗಿ ನೆಲೆಸಿರುವ ಸ್ಥಳೀಯ ಬುಡಕಟ್ಟು ನಿವಾಸಿಗಳ ಸಾಂಪ್ರದಾಯಿಕ ಖಾಸಿ ಉಡುಪನ್ನು ಧರಿಸಿದ್ದರು.

Full View

Similar News