×
Ad

'ಪಿಯುಸಿ ನಂತರ ಮುಂದೇನು?': ಡಿ. 24 ರಂದು ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Update: 2022-12-23 22:22 IST

NMH ಅಲುಮ್ನಿ ಫೌಂಡೇಶನ್ ಡಿ. 24 (ಶನಿವಾರ)ರಂದು ಗೂಗಲ್ ಮೀಟ್ ನಲ್ಲಿ ಆನ್‌ಲೈನ್ ವೃತ್ತಿ ಮಾರ್ಗದರ್ಶನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಿದೆ. ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ಲೈವ್ ಆಗಿ ಪ್ರಸಾರ ಮಾಡಲಾಗುತ್ತದೆ.

ಭಾಷಣಕಾರರು, ವೃತ್ತಿ ಸಲಹೆಗಾರರು ಮತ್ತು CIGMA ಫೌಂಡೇಶನ್‌ನ ಸಂಸ್ಥಾಪಕ ಅಮೀನ್-ಎ-ಮುದಸ್ಸರ್ ಅವರು ಭಾಗವಹಿಸುವ ವಿದ್ಯಾರ್ಥಿಗಳೊಂದಿಗೆ ಪಿಯುಸಿ ನಂತರ ಮುಂದೇನು? ಎಂಬ ವಿಚಾರದ ಕುರಿತು ಮಾತನಾಡಲಿದ್ದಾರೆ.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವೃತ್ತಿ ಅವಕಾಶಗಳನ್ನು ಹುಡುಕುವ ಸಲುವಾಗಿ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು - ವಿಜ್ಞಾನ, ವಾಣಿಜ್ಯ ಮತ್ತು ಕಲಾ ಪಿಯುಸಿ ವಿದ್ಯಾರ್ಥಿಗಳು ಮತ್ತು ಪದವೀಧರರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಅಲ್ಲಿ ಸರ್ಕಾರ, ಕಾರ್ಪೊರೇಟ್‌ಗಳು ಮತ್ತು ಎನ್‌ಜಿಒಗಳ ವಿದ್ಯಾರ್ಥಿವೇತನದ ವಿವರವಾದ ಮಾಹಿತಿಯನ್ನೂ ಹಂಚಿಕೊಳ್ಳಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಭಾಗವಹಿಸಲು, ಕೆಳಗಿನ ಬಾರ್‌ಕೋಡ್ ಬಳಸಿ ಫಾರ್ಮ್‌ಗಳನ್ನು ಭರ್ತಿ ಮಾಡುವ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರು ನೋಂದಾಯಿಸಿಕೊಳ್ಳಬಹುದು. ಈ ಕಾರ್ಯಕ್ರಮದ ಸ್ಟ್ರೀಮಿಂಗ್ ಲಿಂಕ್‌ಗಳನ್ನು ಸಹ ಕೆಳಗೆ ನೀಡಲಾಗಿದೆ.

Similar News